ಮುಂಡರಗಿ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಶಾಸಕ ಚೆನ್ನಾರೆಡ್ಡಿ ತುನ್ನೂರ ಭೇಟಿ
ಕರ್ನಾಟಕ ಭಾಗ್ಯ ಸುದ್ದಿ
ಯಾದಗಿರಿ : ಮುಂಡರಗಿ ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಸೋಮವಾರ ಮಧ್ಯಾಹ್ನ ಶಾಸಕ ಚೆನ್ನಾರೆಡ್ಡಿ ತುನ್ನೂರ ಭೇಟಿ ನೀಡಿ ಪರಿಶೀಲಿಸಿದರು.
ಮುಂಡರಗಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಇಂದರಿAದ ಕೊಂಕಲ್, ಸೈದಾಪೂರ ವಲಯದ ಹಲವು ಹಳ್ಳಿಗಳ ವಿದ್ಯುತ್ ಸಮಸ್ಯೆ ಬಗೆ ಹರಿಯಲಿದೆ ಎಂದ ಅವರು, ಜೆಸ್ಕಾಂ ಅಧಿಕಾರಿಗಳು ಇಚ್ಚಾಸಕ್ತಿ ಪ್ರದರ್ಶಿಸಬೇಕು, ಎಷ್ಟು ಸಾಧ್ಯವೋ ಅಷ್ಟು ಬೇಗ ಕಾಮಗಾರಿ ಮುಗಿದಲ್ಲಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳಾದ ರಾಘವೇಂದ್ರ ದುಖಾನ್, ಕಾಂಗ್ರೆಸ್ ಮುಖಂಡರಾದ ಲಾಯಕ್ ಹುಸೇನ್ ಬಾದಲ್ ಸೇರಿದಂತೆ ಇತರರಿದ್ದರು.