ಮಲೇಷ್ಯಾದಲ್ಲಿ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆಂದು ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಅಪ್ ಡೇಟ್ ನೀಡಿದ್ದಾರೆ ಸದ್ಯದಲ್ಲೇ ಮಾಸ್ ಸಿನಿಮಾ ಕುರಿತು ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ.
ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಯಶ್, ಮಲೇಷ್ಯಾದಲ್ಲಿ ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ.
ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ. ಮಲೇಷ್ಯಾಗೆ ಬಂದಿಳಿದಿದ್ದ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದರು ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎಂದಿದ್ದರು. ಹಾಗೆಯೇ ಯಶ್ ಅಭಿಮಾನಿಗಳನ್ನೂ ಭೇಟಿ ಮಾಡಿದ್ದಾರೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್