ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ತಾಯ್ತನವನ್ನ ಎಂಜಾಯ್ ಮಾಡುತ್ತಾ ಇತ್ತ ಸಿನಿಮಾಗಳತ್ತವೂ ಗಮನ ಹರಿಸುತ್ತಿದ್ದಾರೆ…ತನ್ನ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರೋ ನಟಿ ಅನುಷ್ಕಾ ಶರ್ಮಾ..ರಾಜ್ಯದಲ್ಲಿಯೂ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿರೋ ಅನುಷ್ಕಾ ಮೈಸೂರಿನ ಅಭಿಮಾನಿಯೊಬ್ಬರ ಮದುವೆಗೆ ಬರ್ತಾರೆ ಅನ್ನೋ ಸೂಚನೆ ಸಿಕ್ತಿದೆ…
ಯೆಸ್ ಮೈಸೂರು ಮೂಲದ ನಯನಾ ಹಾಗೂ ರುದ್ರೇಶ್ ಇದೇ ತಿಂಗಳು 24ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..ತಮ್ಮ ಮದುವೆಗೆ ಇಷ್ಟದ ನಟಿ ಬರಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದ ನಯನಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ಅನುಷ್ಕಾಗೆ ಕಳುಹಿಸೊಕೊಟ್ಟಿದ್ದಾರೆ…
ಪತ್ರಿಕೆ ಹಾಗೂ ಅದರ ಜೊತೆಯಲ್ಲಿ ಸಿಹಿಯನ್ನು ಕಳುಹಿಸಿಕೊಟ್ಟಿದ್ದು ಇನ್ವಿಟೇಷನ್ ಅನ್ನು ಅನುಷ್ಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..ಹಾಗೇ ವಧು ಹಾಗೂ ವರರಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ ಅನುಷ್ಕಾ…ಅನುಷ್ಕಾಗೂ ಬೆಂಗಳೂರಿಗೂ ಹಳೆಯ ನಂಟಿದೆ..ಹಾಗಾಗಿ ಕನ್‌ಡ ಪ್ರೀತಿಯೂ ಹೆಚ್ಚಿದೆ..ಹೌದು ಅನುಷ್ಕಾ ತಮ್ಮ ವಿದ್ಯಾಭ್ಯಾಸವನ್ನ ಬೆಂಗಳೂರಿನಲ್ಲಿ ಮುಗಿಸಿದ್ರು…