Karnataka Bhagya
ಇತರೆ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಯಾವುದೇ ಸುದ್ದಿ ಜನರಿಗೆ ತಲುಪಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ತಿದ್ದುವಲ್ಲಿ ಬಹಳಷ್ಟು ಪ್ರಮುಖ ವಹಿಸುತ್ತಾರೆ. ಹಾಗಾಗಿ, ಸಾಮಾಜಿಕ ಕಳಕಳಿಯಿಂದ ಪರಿಣಾಮಕಾರಿಯಾಗಿ ವರದಿ ಮಾಡಿ ಸಮಾಜದ ಅಂಕುಡೊAಕು ತಿದ್ದುವ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ನಗರದಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಸುದ್ದಿಗಳು ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಪತ್ರಕರ್ತರು ಕೊಲೆಯಾದ ಘಟನೆಗಳು ನಡೆದಿವೆ. ಆದ್ದರಿಂದ, ಈ ವೃತ್ತಿಯಲ್ಲಿ ಕೆಲಸ ಮಾಡುವುದು ಅಷ್ಟೊಂದು ಸುಲಭವಿಲ್ಲ ಎಂದರು.
ಪತ್ರಕರ್ತರ ಕೆಲಸ ಬಹಳಷ್ಟು ಕಷ್ಟದ ಕೆಲಸವಾಗಿದ್ದರೂ, ಜನರು ಹೆದರುವುದು ಮಾಧ್ಯಮಗಳಿಗೆ ಮಾತ್ರ. ಅಧಿಕಾರಿಗಳು ಹೆದರಿಸಿದರೆ ಹಾಗೂ ಪೊಲೀಸರು ಕೇಸ್ ಹಾಕುತ್ತೇವೆ ಎಂದರೂ ಜನರು ಹೆದರುವುದಿಲ್ಲ. ಸಮಾಜವನ್ನು ನಿಕೃಷ್ಟ ಪರಿಸ್ಥಿತಿಗೆ ಒಯ್ಯುವಂತಹ ಕೃತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆತ್ತಿದ್ದು, ಜನರು ಕೂಡ ನೋಡಿಕೊಂಡು ಸುಮ್ಮನಿರುತ್ತಾರೆ. ಇಂತಹವುಗಳ ಬಗ್ಗೆ ವರದಿ ಮಾಡಿದರೆ ಇಂದಲ್ಲ, ನಾಳೆ ಜನರು ಪ್ರಶ್ನೆ ಮಾಡುವುದನ್ನು ಕಲಿಯಲಿದ್ದಾರೆ ಎಂದರು.
ಪೋಕ್ಸೊ ಕಾಯ್ದೆಯಡಿ ವರದಿ ಮಾಡುವಾಗ ಹೆಸರು ಹಾಗೂ ವಿಳಾಸ ಗೌಪ್ಯವಾಗಿ ಇಡಬೇಕು. ಇಂತಹ ಮಾಹಿತಿ ಪ್ರಕಟಿಸಿದರೆ ಅದು ಅಪರಾಧ ಆಗಲಿದೆ. ಇಂತಹ ಸೂಕ್ಷ್ಮತೆ ಅರಿತುಕೊಂಡು ಕೆಲಸ ಮಾಡಬೇಕು ಎಂದರು.
ವರದಿ ಆಗಬೇಕಾದ ಸುದ್ದಿಗಳನ್ನು ಹಾಗೂ ಕಾನೂನು ಬಾಹಿರ ಕೆಲಸಗಳನ್ನು ವರದಿ ಮಾಡಿದರೆ ಸಮಾಜದ ಬೆಳವಣಿಗೆಗೆ ಅನುಕೂಲವಾಗಲಿದೆ. ಆದ್ದರಿಂದ, ಏನೇ ಸಮಸ್ಯೆಯಿದ್ದರೂ ಪ್ರಕಟಿಸಿದರೆ ಸರಿಪಡಿಸಲು ಸಾಧ್ಯವಾಗಲಿದೆ. ಸಮಾಜಘಾತುಕ ಶಕ್ತಿಗಳೊಂದಿಗೆ ಬ್ರಿಟೀಷರ ಆಡಳಿತದಲ್ಲೂ ಸುದ್ದಿ ಮಾಡಲಾಗುತ್ತಿತ್ತು. ಸ್ವಾತಂತ್ರö್ಯ ಚಳವಳಿ ಸಮಯದಲ್ಲೂ ಪತ್ರಕರ್ತರು ಛಾಪು ಮೂಡಿಸುವ ಕೆಲಸಮಾಡಿದ್ದಾರೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿ ಇದ್ದಂತೆ. ಪ್ರಶಸ್ತಿ ಎಂಬುದು ಜವಾಬ್ದಾರಿ ಹೆಚ್ಚಿಸಲಿದೆ. ಆದರೆ, ಕೆಲವೊಂದು ಪತ್ರಿಕೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳುವುದು ಕೂಡ ನಡೆಯುತ್ತಿದೆ. ಇಂತಹಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅನ್ಯಾಯಕ್ಕೊಳಗಾದ ನಿರಾಶ್ರಿತರಿಗೆ ಎಲ್ಲಿಯೂ ನ್ಯಾಯ ದೊರೆದಿದ್ದಾಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಸುದ್ದಿ ಪ್ರಕಟಿಸುವುದರಿಂದ ನ್ಯಾಯ ದೊರಕುತ್ತದೆ. ಆದ್ದರಿಂದ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದಿAದ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ ಎಂದು ತಿಳಿಸಿದರು.
ಆರೋಗ್ಯ ಸಂಬAಧ ನಗರಸಭೆ ಅನುದಾನ ಮೀಸಲಿಟ್ಟಿದೆ. ಮುಂದಿನ ಬಜೆಟ್‌ನಲ್ಲಿ ಕೂಡ ಮೀಸಲಿಡಲಾಗುತ್ತದೆ. ಪತ್ರಕರ್ತರ ನಿವೇಶನಕ್ಕೆ ಸಂಬAಧಿಸಿದAತೆ ನಗರಸಭೆ ಯಾವಾಗಲೂ ಸಹಕಾರ ನೀಡುತ್ತದೆ. ನಮ್ಮ ಅವಧಿ ಮುಗಿಯುವುದರೊಳಗೆ ನಿವೇಶನ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿದ ವಿಜಯ ಕರ್ನಾಟಕ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಮಾತನಾಡಿ, ಮಾನವ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರಂಗದಲ್ಲೂ ಯಾದಗಿರಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಸಾಕ್ಷರತೆ ಪ್ರಮಾಣ ಹೆಚ್ಚಾದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಕ್ರಮ ವಹಿಸುತ್ತಿದ್ದರೂ, ಅವಕಾಶ ಬಂದಾಗಲೆಲ್ಲ ಹಿಂದುಳಿದ ಜಿಲ್ಲೆಯ ಬಗ್ಗೆ ವರದಿಗಳನ್ನು ಮಾಡುವುದರಿಂದ ಈ ಭಾಗದ ಅಭಿವೃದ್ಧಿಗೆ ಮನ್ನಣೆ ದೊರೆಯಲಿದೆ ಎಂದರು.
ಪತ್ರಿಕಾರAಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಅಧಿಕೃತವಾಗಿಲ್ಲದಿದ್ದರೂ, ಆಳುವ ಸರಕಾರಗಳು ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಹೊರಟಾಗ ಹಲವಾರು ಸಂದರ್ಭಗಳಲ್ಲಿ ಮಾಧ್ಯಮಗಳ ಪರವಾಗಿ ಸುಪ್ರೀಂಕೋರ್ಟ್ ನಿಂತಿರುವ ನಿದರ್ಶನಗಳಿವೆ. ಪತ್ರಕರ್ತರು ಸ್ವಯಂ ನಿಯಂತ್ರಣ ಹಾಕಿಕೊಂಡು ಸಮಾಜಕ್ಕೆ ಉಪಕಾರಿಯಾಗುವಂತ ವರದಿಗಳನ್ನು ಮಾಡಬೇಕು ಎಂದು ಸಲಹೆ ನೀಡಿದ ಅವರು, ಕರ್ನಾಟಕದಲ್ಲಿ ಅತ್ಯಂತ ಕ್ರಿಯಾಶೀಲ ಸಂಘ ಯಾದಗಿರಿ ಕಾರ್ಯನಿರತ ಪತ್ರಕರ್ತರ ಸಂಘವಾಗಿದೆ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಮಾರಾಟವಾದ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ. ಪತ್ರಿಕೋದ್ಯಮ ಕವಲು ದಾರಿಯಲ್ಲಿದ್ದು, ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಾಗಿದೆ ಎಂದು ಹೇಳಿದರು.
ಪತ್ರಿಕೆಗಳ ಪ್ರಸರಣ ಸಂಖ್ಯೆ ಏರಿಕೆಯಾಗುತ್ತಿರುವುದು ಗಮನಿಸಿದರೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿರುವಂತೆ ಕಾಣುತ್ತಿದೆ. ಜವಾಬ್ದಾರಿಯಿಟ್ಟುಕೊಂಡು ಕೆಲಸಮಾಡಿದ ಪತ್ರಕರ್ತರಿಗೆ ಕೀರ್ತಿ ಸಿಗಲಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದರಿಂದ ಪತ್ರಿಕೋದ್ಯಮ ಶ್ರೇಷ್ಠತೆ ಮೆರೆಯಲು ಸಾಧ್ಯ ಎಂದ ಅವರು, ಕಲ್ಯಾಣ ಕರ್ನಾಟಕದ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ ಕಲಬುರಗಿಯಲ್ಲಿ ಮಾಡಲು ಉದ್ದೇಶಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಕನ್ನಡ ಪ್ರಭ ಸ್ಥಾನಿಕ ಸಂಪಾದಕ ಅಪ್ಪಾರಾವ ಸೌದಿ ಮಾತನಾಡಿ, ಸಮಾಜಕ್ಕೆ ಎಚ್ಚರಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಹಿಂದೆಲ್ಲ ಬೆಂಗಳೂರಿಗೂ ಇಲ್ಲಿಯ ಸುದ್ದಿ ಹೋಗುತ್ತಿತ್ತು. ಜಿಲ್ಲಾವಾರು ಎಡಿಷನ್ ಆಗಿರುವುದರಿಂದ ಪಕ್ಕದ ಜಿಲ್ಲೆಗೂ ಹೋಗುತ್ತಿಲ್ಲ. ಸುದ್ದಿ ವ್ಯಾಪ್ತಿ ಕಡಿಮೆಯಾಗುತ್ತ್ತಿರುವುದು ಬೇಸರದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸಂಕಷ್ಟದಲ್ಲಿರುವ ಹಲವು ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಸಂಘದಿAದ ಇಲ್ಲಿಯವರೆಗೆ ೨ ಲಕ್ಷದ ೯೦ ಸಾವಿರ ನೆರವು ನೀಡಲಾಗಿದೆ. ಇತಿ-ಮಿತಿಯಲ್ಲೇ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸ ಮಾಡಲಾಗಿದೆ. ಸಂಘದ ಪ್ರಯತ್ನದಿಂದ ನಗರಸಭೆಯಿಂದ ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸಿ ಅನುದಾನ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕ ಮಾತನಾಡಿ, ಮಲ್ಲಪ್ಪ ಸಂಕೀನ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯ ಸಂಘದಿAದ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಉತ್ತಮವಾಗಿ ಸಂಘಟನೆ ಮಾಡುವ ಮೂಲಕ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕದ ಸೋಮಶೇಖರ ಕಿಲಾರಿ, ಕರ್ನಾಟಕ ಮಾಧ್ಯಮ ಮಾನತಾ ಸಮಿತಿಯ ನೂತನ ಸದಸ್ಯ ಗುರುರಾಜ ಕುಲಕರ್ಣಿ, ಕೆಯುಡಬ್ಲೂಜೆಯ ರಾಜ್ಯಮಟ್ಟದ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತ ನಾಮದೇವ ವಾಟ್ಕರ್, ಕೆಯುಡಬ್ಲೂಜೆಯ ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿ ಪುರಸ್ಕೃತ ವಿಜಯಭಾಸ್ಕರರೆಡ್ಡಿ, ಜಿಲ್ಲಾಡಳಿತದಿಂದ ಮಾಧ್ಯಮ ಕ್ಷೇತ್ರದಿಂದ ಪ್ರಶಸ್ತಿ ಪುರಸ್ಕೃತ ವಿಶಾಲಕುಮಾರ ಶಿಂಧೆ ಅವರನ್ನು ಸನ್ಮಾನಿಸಲಾಯಿತು.
ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ್ ಇದ್ದರು.
ಪತ್ರಕರ್ತ ಮಲ್ಲಿಕಾರ್ಜುನ ಆಶನಾಳ ಸ್ವಾಗತಿಸಿದರು. ಪತ್ರಕರ್ತ ನರಸಪ್ಪ ನಾರಾಯಣೋರ್ ನಿರೂಪಿಸಿ, ವಂದಿಸಿದರು.

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ

Related posts

ಟ್ರೆಂಡಿಂಗ್ ಲಿಸ್ಟ್ ಸೇರಿದ ಯಶ್ ಹೆಸರು

Nikita Agrawal

ಬರಲಿದೆ ಲಾಯರ್ ‘ಬೀರಬಲ್’ನ ಎರಡನೇ ಕೇಸ್!!

Nikita Agrawal

ಡಿಲೀಟ್ ಆಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದ ಕಿರಣ್ ರಾಜ್

Nikita Agrawal

Leave a Comment

Share via
Copy link
Powered by Social Snap