ಕಲಿಕಾ ಆಸಕ್ತಿ ಇದ್ದಲ್ಲಿ ಬೆಳವಣಿಗೆ ಸಾಧ್ಯ : ಪ್ರೊ. ಹೆಚ್.ಸಿ ವರ್ಮಾ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಇಂದು ಪ್ರಪಂಚದಲ್ಲಿ ಬಹುತೇಕ ದೇಶಗಳು ಕಲಿಕೆ, ಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿವೆ, ಅದರಂತೆ ಭಾರತ ದೇಶವು ಕೂಡ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮುನ್ನುಗ್ಗುತ್ತಿದೆ, ಕಾರಣ ಈ ಭಾಗದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ತಮ್ಮ ಬದುಕಿನಲ್ಲಿ ಶ್ರದ್ದೆಯಿಂದ ಕಲಿಕಾ ಆಸಕ್ತಿ ಬೆಳೆಸಿಕೊಂಡು ಬೌದ್ಧಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಪದ್ಮಶ್ರೀ ಭೌತಶಾಸ್ತçಜ್ಞ ಪ್ರೊ. ಹೆಚ್.ಸಿ ವರ್ಮಾ ಸಲಹೆ ನೀಡಿದರು.
ನಗರದ ಆರ್ಯಭಟ್ಟ ಅಂತರರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ೩ ದಿನಗಳ ಕಾರ್ಯಾಗಾರದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಯಾವುದೇ ವಿಷಯದಲ್ಲಾಗಲೀ ಮೊದಲು ಅವರಲ್ಲಿ ಕಲಿಕಾ ಉತ್ಸಾಹ, ಏಕಾಗ್ರತೆ, ಛಲ ಇರುತ್ತದೆ, ಅವರಿಗೆ ಈ ಜಗತ್ತಿನಲ್ಲಿ ಯಾವುದೇ ವಿಷಯವಾಗಲಿ ಕಠೀಣ ವಾಗುವದಿಲ್ಲ, ಈ ನಿಟ್ಟಿನಲ್ಲಿ ಸಮಯಪ್ರಜ್ಞೆಯೊಂದಿಗೆ ಪರಿಶ್ರಮ ಪಟ್ಟರೆ ಕಠೀಣವಾಗುವುದಿಲ್ಲ ಎಂದರು.
ಶಿಕ್ಷಕರು ಮೊದಲು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಬೋಧನೆ ಮಾಡುವ ಮುನ್ನ, ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಹಾಗೂ ಮುಂದುವರೆದ ರಾಷ್ಟçಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಹೊರ ಬರುತ್ತಿರುವ ಹೊಸ ವಿಷಯಗಳು, ಸಂಶೋಧನೆಗಳನ್ನು ತಿಳಿದುಕೊಂಡು ಹೆಚ್ಚಿನ ವಿಷಯ ಬೋಧನೆ ಮಾಡಬೇಕು ಅಂದಾಗ ಮಾತ್ರ ಅವರಲ್ಲಿ ಇನ್ನೂ ಹೆಚ್ಚಿನ ಕಲಿಕಾ ಆಸಕ್ತಿ ವೃದ್ದಿಯಾಗುತ್ತದೆ, ಸಮಯ ಸಿಕ್ಕಾಗ ಅವರೊಂದಿಗೆ ವಿಷಯಗಳ ಕುರಿತು ಚರ್ಚೆ, ವಿಮರ್ಶೆ, ಸಂಶೋಧನೆ ಬಗ್ಗೆ ಅವರಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಬೇಕು, ಇದು ಅವರ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ದೇಶದ ಶಕ್ತಿಯಾಗಿರುವ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಮೊದಲು ಮೊಬೈಲ್‌ಗಳ ಬಳಕೆ ಕಡಿಮೆ ಮಾಡಬೇಕು, ಜೊತೆಗೆ ಶಾಲೆಯಿಂದ ಮನೆಗೆ ತೆರಳಿದ ಮೇಲೆ ಟಿ.ವಿ ನೋಡುವುದನ್ನು ಕಡಿಮೆ ಮಾಡಿ, ದೈನಂದಿನ ಪಠ್ಯ ಪುಸ್ತಕಗಳ ಅಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಿ, ಬೆಳಿಗ್ಗೆ ದಯವಿಟ್ಟು ಎಲ್ಲರೂ ಸ್ವಲ್ಪ ಸಮಯ ಧ್ಯಾನ, ಯೋಗಕ್ಕೆ ನೀಡಿ, ಅದರಂತೆ ದಿನವಿಡೀ ನೀವೂ ಸಕರಾತ್ಮಕ ಚಿಂತನೆ, ಚಟುವಟಿಕೆಗಳೊಂದಿಗೆ ಆರೋಗ್ಯದಿಂದ ಜೀವನ ಕಳೆಯುತ್ತೀರಿ ಎಂದು ಕಿವಿ ಮಾತು ಹೇಳಿದರು.
ನಾನು ಬಿಸಿಲು ನಾಡಿಗೆ ಮೊದಲ ಬಾರಿಗೆ ಆಗಮಿಸಿದ್ದೇನೆ, ಇಲ್ಲಿನ ಸಮಸ್ಯೆಗಳನ್ನು ಸೂಕ್ಷö್ಮತೆಯಿಂದ ಗಮನಿಸಿದ್ದೇನೆ, ನಾವೂ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಕೇವಲ ಬೋಧನೆ ಮಾಡಿದರೆ ಸಾಲದು, ಅವರಿಂದ ಆಗಾಗ ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನ ಮಾಡಿಸಬೇಕು, ಜೊತೆಗೆ ಶಿಕ್ಷಕರು ಆ ವಿಷಯಗಳ ಬಗ್ಗೆ ಅವರಿಗೆ ವಿವರಿಸಬೇಕು, ಆಗ ಅವರು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾರೆ ಎಂದರು.
ಇಲ್ಲಿ ಮಾನವ ಸಂಪನ್ಮೂಲಕ್ಕೆ ಏನು ಕೊರತೆಯಿಲ್ಲ, ನಾವೂ ಸಮಚಿತ್ತಪ್ರಜ್ಞೆ, ದೂರದೃಷ್ಟಿಯೊಂದಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಬಗ್ಗೆ ಬೋಧನೆ, ಪ್ರೋತ್ಸಾಹ, ಆತ್ಮವಿಶ್ವಾಸ ನೀಡಿದರೆ ಅವರಿಗೆ ಪರೀಕ್ಷೆಗಳಲ್ಲಿ ನೀಡುವ ಪ್ರಶ್ನೆಪತ್ರಿಕೆಗಳ ಬಗ್ಗೆ ತಮ್ಮಲ್ಲಿರುವ ಭಯ ದೂರವಾಗಿ ಚೆನ್ನಾಗಿ ತಮ್ಮ ಜ್ಞಾನ ಪ್ರದರ್ಶನ ಮಾಡಿ, ಉತ್ತಮ ಅಂಕಗಳನ್ನು ಪಡೆದು, ಇನ್ನೂ ಹೆಚ್ಚಿನ ಸಾಧನೆ ಮಾಡುವ ಗುರಿ ಅವರಲ್ಲಿ ಪ್ರಬಲವಾಗುತ್ತದೆ ಎಂದು ಭೌತಶಾಸ್ತç ಮತ್ತು ಜೀವಶಾಸ್ತçದ ಮಹತ್ವದ ವಿಷಯಗಳನ್ನು ವಿವರಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಕಲಬುರಗಿಯ ವಿಕಾಸ ಅಕಾಡೆಮಿಯ ಸಂಯೋಜಕರಾದ ಡಾ. ಬಸವರಾಜ ಪಾಟೀಲ ಸೇಡಂ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಜ್ಞಾನದ ಮುಕುಟವಾಗಿರುವ ಪ್ರೊ. ಹೆಚ್.ಸಿ ಶರ್ಮಾ ಅವರು ಇಲ್ಲಿಗೆ ಆಗಮಿಸಿ, ತಮ್ಮ ಅಪಾರ ಜ್ಞಾನವನ್ನು ಎಲ್ಲರಿಗೂ ನೀಡುತ್ತಿರುವುದು ನಮ್ಮೇಲ್ಲರ ಭಾಗ್ಯ, ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ, ವಿಷಯ ಅರಿತುಕೊಂಡು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡಿ ಎಂದು ಕರೆ ನೀಡಿದರು.
ತಮ್ಮ ಸೇವಾ ಅವಧಿಯಲ್ಲಿ ನಿವೃತ್ತಿಯಾದರು ವರ್ಮಾ ಅವರು ಬಿಹಾರದ ತಮ್ಮ ಹಳ್ಳಿಯಲ್ಲಿರುವ ಸ್ವಂತ ಜಮೀನಿನಲ್ಲಿ ವಿಜ್ಞಾನ ಕೇಂದ್ರ ತೆರೆದು ನಿರಂತರ ಜ್ಞಾನ ಮಾರ್ಗದರ್ಶನ ನೀಡುವ ಮೂಲಕ ನಾಡಿನ ಪ್ರಗತಿಗೆ ತಮ್ಮದೇ ಮಹತ್ವದ ಕೊಡುಗೆ ನೀಡುತ್ತಿದ್ದಾರೆ, ಇಲ್ಲಿರುವ ಆರ್ಯಭಟ್ಟ ಶಿಕ್ಷಣ ಸಂಸ್ಥೆಯಲ್ಲಿ, ಸಂಸ್ಥೆಯವರು ಅಪಾರ ಹಣ ಖರ್ಚು ಮಾಡಿ, ೩ ದಿನಗಳ ಕಾಲ ಶಿಕ್ಷಕರಿಗೆ ಉಪನ್ಯಾಸ ಕೊಡಿಸುತ್ತಿದ್ದಾರೆ, ಇದು ಬರುವ ದಿನಗಳಲ್ಲಿ ಬದಲಾವಣೆಗೆ ಖಂಡಿತ ಪ್ರೇರಣೆ ಸಿಗುತ್ತದೆಂದು ನಾನು ನಂಬಿದ್ದೇನೆ ಎಂದು ತಿಳಿಸಿದರು,
ಪ್ರಾಸ್ತಾವಿಕವಾಗಿ ಅಕಾಡೆಮಿಯ ಅಧ್ಯಕ್ಷ ಸುಧಾಕರರಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿ, ನಾವೂ ನಮ್ಮ ಶಿಕ್ಷಣ ಸಂಸ್ಥೆ ಮಾತ್ರ ಪ್ರಗತಿ ಸಾಧಿಸಿದರೆ ಸಾಲದು, ಅದರಂತೆ ಜಿಲ್ಲೆಯಲ್ಲಿರುವ ಸರ್ಕಾರಿ-ಅನುದಾನಿತ ಶಾಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಉದ್ದೇಶದೊಂದಿಗೆ ಕಾರ್ಯಾಗಾರ ಹಮ್ಮಿಕೊಂಡು ವರ್ಮಾ ಅವರು ರಚಿಸಿರುವ ಅನೇಕ ಪುಸ್ತಕಗಳನ್ನು ನಾವೂ ಉಚಿತವಾಗಿ ಶಿಕ್ಷಕರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ವೇದಿಕೆ ಮೇಲೆ ಹಿರಿಯ ಭೌತ ಶಾಸ್ತçಜ್ಞರಾದ ಶರ್ಮಿಷ್ಠಾ ಬೆಂಗಳೂರು, ಪ್ರಾಂಶುಪಾಲರಾದ ಪಿ. ಅರವಿಂಧಾಕ್ಷಣ ಉಪಸ್ಥಿತರಿದ್ದರು.
ಆರ್ಯಭಟ್ಟ ಪಿ.ಯು ಕಾಲೇಜ್ ಪ್ರಾಂಶುಪಾಲರಾದ ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.