ಸಿನಿಮಾ ಜರ್ನಿಯ ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಇತರೇ ಭಾಷೆಗಳಲ್ಲಿ ಬ್ಯುಸಿಯಾಗಿರುವ ಕಿರಿಕ್ ಬೆಡಗಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗೆ ಇವಳ ವ್ಯವಹಾರ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಈಗ ನಟಿಗೆ ದ್ರೋಹ ಬಗೆದು 80 ಲಕ್ಷದೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ಈ ಘಟನೆ ಕುರಿತು ನಟಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೋ ಅಥವಾ ಮ್ಯಾನೇಜರ್ ಮೇಲೆ ಕೇಸ್ ದಾಖಲಿಸಿದ್ದಾರೋ ಅಥವಾ ಕೆಲಸದಿಂದ ಆತನನ್ನ ತೆಗೆದು ಹಾಕಿದ್ದಾರೋ ಅಂಥಾ ಸದ್ಯಕ್ಕೆ ಯಾವುದೆ ಅಪ್ಡೇಟ್ ಇಲ್ಲ.

ಸಿನಿಮಾ ಉದ್ಯಮದಲ್ಲಿ ಈ ರೀತಿಯ ಪ್ರಕರಣಗಳು ಇದೇ ಮೊದಲೇನಲ್ಲ. ಇಂಥ ಎಷ್ಟೋ ಘಟನೆಗಳು ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದ ಉದಾಹರಣೆಗಳಿವೆ. ಬಾಲಿವುಡ್‌ನಲ್ಲಿಯೂ ಸ್ಟಾರ್ ಕಲಾವಿದರಿಗೇ ಉಂಡೆ ನಾಮ ತಿಕ್ಕಿದವರೂ ಇದ್ದಾರೆ. ಇದೀಗ ನಟಿ ರಶ್ಮಿಕಾಗೂ ಆ ಅನುಭವ ಆಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯುತ್ತಿದ್ದಂತೆ, ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ :
ಹೀಗೆ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆ ವ್ಯಕ್ತಿಯನ್ನು ರಶ್ಮಿಕಾ ಕೆಲಸದಿಂದ ವಜಾ ಮಾಡಿದ್ದಾರೆ. ಆದರೆ, ವಂಚಿಸಿದ ಹಣ ಮರಳಿ ಪಡೆದಿದ್ದಾರೆಯೇ? ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ ಎಂಬ ಬಗ್ಗೆ ಇನ್ನಷ್ಟೇ ಅಪ್‌ಡೇಟ್ ಮಾಹಿತಿ ಹೊರಬೀಳಬೇಕಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್