Karnataka Bhagya
ಕರ್ನಾಟಕ

ರಸ್ತೆ ಮೇಲೆ ಕಸ ಪಿಡಬ್ಲುಡಿ ಅಧಿಕಾರಿಗೆ ಬಿತ್ತು ದಂಡ

ರಸ್ತೆ ಮೇಲೆ ಕಸ ಪಿಡಬ್ಲುಡಿ ಅಧಿಕಾರಿಗೆ ದಂಡ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ರಸ್ತೆ ಮೇಲೆ ಕಸ ಹಾಕಿದ್ದ ಪಿಡಬ್ಲುಡಿ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಅಧಿಕಾರಿಗೆ ದಂಡ ಹಾಕಿ ಮತ್ತೊಮ್ಮೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆ ವನಮಹೋತ್ಸವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ನಗರದ ಸುಭಾಶ್ಚಂದ್ರ ಬೋಸ್ ವೃತ್ತದ ಬಳಿ ಇರುವ ಪಿಡಬ್ಲುಡಿ ಇಲಾಖೆ ಕಚೇರಿಯ ಬಳಿ ಇಲಾಖೆಯ ಸಿಬ್ಬಂದಿಗಳು ಮುಖ್ಯರಸ್ತೆ ಮೇಲೆ ಕಸದ ಗುಡ್ಡೆಯನ್ನು ಹಾಕಿದ್ದನ್ನು ಗಮನಿಸಿದ ಅಧ್ಯಕ್ಷರು, ಕಚೇರಿ ಸಿಬ್ಬಂದಿಗೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿ ತೆರಳಿದ್ದರು.
ಕಾರ್ಯಕ್ರಮ ಮುಗಿದ ಮೇಲೆ ಮತ್ತೇ ಅದೇ ಮುಖ್ಯರಸ್ತೇ ಮೇಲೆ ಬರುವಾಗಲೂ ಕೂಡ ಕಸ ಹಾಗೇಯೇ ಇರುವುದರಿಂದ ಕಾರಿನಿಂದ ಕೆಳಗಿಳಿದ ನಗರಸಭೆ ಅಧ್ಯಕ್ಷರು ಅಧಿಕಾರಿಗಳನ್ನು ಕರೆಯಿಸಿ, ನಗರಸಭೆ ಸಿಬ್ಬಂದಿಗಳಿಗೆ ಕರೆಯಿಸಿ ಪಿಡಬ್ಲುಡಿ ಅಧಿಕಾರಿಗೆ ದಂಡ ಹಾಕುವಂತೆ ಸೂಚಿಸಿದರು.
ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ಪಿಡಬ್ಲುಡಿ ಅಧಿಕಾರಿಗೆ ೨೦೦ ರೂಪಾಯಿ ದಂಡ ರಸೀದಿ ನೀಡಿ ಮತ್ತೊಮ್ಮೆ ರಸ್ತೆ ಮೇಲೆ ಕಸ ಸುರಿಯದಂತೆ ಸೂಚನೆ ನೀಡಿದರು.
ಸ್ಥಳದಲ್ಲಿಯೇ ದಂಡ ಪಾವತಿಸಿದ ಅಧಿಕಾರಿ ನಗರಸಭೆ ಅಧ್ಯಕ್ಷರಿಗೆ ಕ್ಷಮೆ ಕೋರಿ ಮತ್ತೊಮ್ಮ ಈ ರೀತಿ ತಪ್ಪು ಮಾಡುವುದಿಲ್ಲವೆಂದರು.
ಈ ಸಂದರ್ಭದಲ್ಲಿ ನಗರಸಭೆ ಕಾನೂನು ಸಲಹೆಗಾರರಾದ ಶರಣಗೌಡ ಬಲಕಲ್, ಅಧಿಕಾರಿಗಳಾದ ಶಿವಪುತ್ರ ಸೇರಿದಂತೆ ಸಿಬ್ಬಂದಿಗಳು ಇದ್ದರು.

ರಸ್ತೆ ಮೇಲೆ ಕಸ ಹಾಕಿದರೆ ದಂಡ ಗ್ಯಾರಂಟಿ
ನಾವು ಸ್ವಚ್ಚ ಯಾದಗಿರಿ ನಗರಕ್ಕಾಗಿ ಪಣತೊಟ್ಟಿದ್ದೇವೆ ಅದಕ್ಕಾಗಿ ಕಸ ಕಂಡಲ್ಲಿ ಪೋಟೋ ಕಳಿಸಿ ಎಂಬ ಅಭಿಯಾನವನ್ನು ಕೂಡ ಮಾಡುತ್ತಿದ್ದೇವೆ, ಪೋಟೋ ಬಂದ ತಕ್ಷಣ ಅಲ್ಲಿ ನಮ್ಮ ನಗರಸಭೆ ಸಿಬ್ಬಂದಿ ಹಾಜರಾಗಿ ಅಲ್ಲಿನ ಕಸವನ್ನು ವಿಲೇವಾರಿ ಮಾಡಿ ಸ್ವಚ್ಚ ನಗರ ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ ಇದನ್ನು ಮರೆತು ಯಾರಾದರೂ ರಸ್ತೆ ಮೇಲೆ ಕಸ ಹಾಕಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ, ದಂಡ ಹಾಕುವುದರ ಜೊತೆಗೆ ಯಾವುದಾದರೂ ಇಲಾಖೆ ಅಥವಾ ಸಂಸ್ಥೆಯವರು ರಸ್ತೆ ಮೇಲೆ ಕಸ ಹಾಕಿದಲ್ಲಿ ಶಿಸ್ತುಕ್ರಮಕ್ಕಾಗಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ.

  • ಕು.ಲಲಿತಾ ಮೌಲಾಲಿ ಅನಪೂರ ನಗರಸಭೆ ಅಧ್ಯಕ್ಷರು, ಯಾದಗಿರಿ

Related posts

‘ವಿಕ್ರಾಂತ್ ರೋಣ’ನ ಲೋಕದ ಝಲಕ್ ಗೆ ಮುಹೂರ್ತ ಫಿಕ್ಸ್.

Nikita Agrawal

ವನಮಹೋತ್ಸವ ಬ್ಯಾನರ್‌ನಲ್ಲಿ ಶಾಸಕರನ್ನೇ ಕೈಬಿಟ್ಟಾರಲ್ರಿ

Mahesh Kalal

ಕಿರುತೆರೆಯಿಂದ ಹಿರಿತೆರೆಗೆ ನಾಯಕನಾಗಿ ಹಾರುತ್ತಿರುವ ನಟ

Nikita Agrawal

Leave a Comment

Share via
Copy link
Powered by Social Snap