22.5 C
Bengaluru
March 17, 2026
Karnataka Bhagya
Blog

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿರುವುದಕ್ಕೆ ಕಲಾಪ ಸ್ಥಗಿತವೇ ಉತ್ತರ : ಶ್ರೀಧರ ಸಾಹುಕಾರ

ಕರ್ನಾಟಕ ಭಾಗ್ಯ ಯಾದಗಿರಿ : ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರಾಜಕೀಯ ಶಕ್ತಿ ಕೇಂದ್ರವಾಗಿರುವ ವಿಧಾನಸಭೆ ಅಧಿವೇಶಕನಕ್ಕೆ ಸರಿಯಾಗಿ ಸಚಿವರು ಹಾಜರಾಗುತ್ತಿಲ್ಲ, ಶಾಸಕರ ತಮ್ಮ-ತಮ್ಮ ಮತಕ್ಷೇತ್ರಗಳ ಜನರ ಸಮಸ್ಯೆಗಳಿಗೆ ಉತ್ತರಿಸುವ ಇಲಾಖೆಗಳ ಕಾರ್ಯದರ್ಶಿಗಳು ಕೂಡ ಲಿಖಿತ ಉತ್ತರ ನೀಡುತ್ತಿಲ್ಲ, ಹೀಗಾದರೇ ಹೇಗೆ ಸದನ ನಡೆಸಬೇಕೆಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ ಕಲಾಪ ಸ್ಥಗಿತಗೊಳಿಸಿರುವುದನ್ನು ಗಮನಿಸಿದರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿರುವುದು ಬಹಿರಂಗವಾಗಿದೆ ಎಂದು ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಅಧಿಕಾರಕ್ಕೆ ಬಂದ ದಿನದಿಂದ ಮುಖ್ಯಮಂತ್ರಿ ಖುರ್ಚಿಗಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಬಣಗಳ ಮಧ್ಯೆ ಕಿತ್ತಾಟ ಇಂದಿನ ದಿನವರೆಗೆ ನಡೆಯುತ್ತಿದೆ, ಅಧಿವೇಶನ ಸಮಯದಲ್ಲಿ ಪ್ರಮುಖ ಖಾತೆಗಳ ಸಚಿವರು ವಿಧಾನಸಭೆಗೆ ಆಗಮಿಸುತ್ತಿಲ್ಲ, ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಪರಿಣಾಮ ಜನಸಾಮಾನ್ಯರು ಸರ್ಕಾರದ ಕಾರ್ಯವೈಖರಿ ಬಗ್ಗೆ ರೋಸಿ ಹೋಗಿದ್ದಾರೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಈ ಮೊದಲು ಸ್ಪೀಕರ್ ಅವರು ಕೂಡ ಹಲವಾರು ಭಾರಿ ಆಡಳಿತ ಯಂತ್ರ ಚುರುಕುಗೊಳಿಸಲು ಸೂಚಿಸಿದರು ಬದಲಾವಣೆಯಾಗಿಲ್ಲ, ಬದಲಾಗಿ ಇಡೀ ಮುಖ್ಯಮಂತ್ರಿ ತಂಡ ಅಧಿಕಾರ ಖುರ್ಚಿ ಉಳಿಸಿಕೊಳ್ಳಲು ಹೆಚ್ಚು ಗಮನ ನೀಡುತ್ತಿದೆ, ಇನ್ನೊಂದು ಕಡೆ ಡಿ.ಕೆ ಶಿವಕುಮಾರ ಅವರ ತಂಡ ಮುಖ್ಯಮಂತ್ರಿ ಅಧಿಕಾರ ಡಿಕೆಶಿಗೆ ಕೊಡಿಸಲು ದೆಹಲಿ ಪೆರೇಡ್ ನಡೆಸುತ್ತಿದ್ದಾರೆ, ತಮ್ಮ ಮತಕ್ಷೇತ್ರಗಳಿಗೆ ಸೂಕ್ತ ಅನುದಾನ ಬಜೆಟ್‌ನಲ್ಲಿ ಸಿಕ್ಕಿಲ್ಲ ಎಂದು ಹಲವು ಶಾಸಕರು ಬಹಿರಂಗವಾಗಿ ಸರ್ಕಾರದ ನಡೆಯನ್ನು ಟೀಕಿಸಿ, ಕ್ಷೇತ್ರಗಳನ್ನೆ ಮರೆತಿದ್ದಾರೆ ಎಂದು ಹೇಳಿದರು.
ಕಳೆದ ೩ ವರ್ಷಗಳಲ್ಲಿ ರಾಜ್ಯದಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಜರುಗುತ್ತಿಲ್ಲ, ಹಲವಾರು ಸಚಿವರು ಭ್ರಷ್ಟಾಚಾರವೆಸಗಿದ್ದಾರೆ, ಶಾಸಕರಿಗೆ ಪರ್ಸಂಟೇಜ್ ಲಂಚದ ಹಣ ಮುಟ್ಟಿದ ಮೇಲೆಯೇ ಕಾಮಗಾರಿಗಳಿಗೆ ಶಂಕುಸ್ಥಾಪನೆಗೆ ಆಗಮಿಸುತ್ತಿದ್ದಾರೆ, ಇದನ್ನು ಮುಚ್ಚಿಕ್ಕೊಳ್ಳಲು ಕೆಲ ಪ್ರಭಾವಿ ಸಚಿವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ದಿನಾಲೂ ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ , ಎಲ್ಲವನ್ನು ಗಮನಿಸುತ್ತಿರುವ ಜನರು ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ..

Related posts

ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಹೇಳಿದ್ದೇನು ಗೊತ್ತಾ?

Nikita Agrawal

ವಿದೇಶ ಸುತ್ತಿ ಮನೆಗೆ ಬಂದ ರಶ್ಮಿಕಾಗೆ ಸಿಕ್ತು ಮುತ್ತಿನ‌ ವೆಲ್ಕಂ‌

Karnatakabhagya

ಫೋಟೋಗಳಲ್ಲಿ ಸೆರೆ ಆಯ್ತು ನಟಿ ಕಾವ್ಯಗೌಡ ಮದುವೆ ಸಂಭ್ರಮ‌

Karnatakabhagya

Leave a Comment

Share via
Copy link
Powered by Social Snap