ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಟೀಸರ್ ಬೆಳಗ್ಗೆ 5 ಗಂಟೆಗೆ ರಿಲೀಸ್ ಆಗಿದೆ. ಸತತ 3 ವರ್ಷಗಳಿಂದ ಅಭಿಮಾನಿಗಳು ಸಲಾರ್ ಟೀಸರ್ ಗಾಗಿ ಕಾದಿದ್ದರು, ಆದ್ರೆ ಟ್ರೇಲರ್ ರಿಲೀಸ್ ಆಗಿ 6 ಗಂಟೆಗಳು ಕಳೆದರು ಸಹ ಕೇವಲ ಒಂದು ಮಿಲಿಯನ್ ಮಾತ್ರ ವೀವ್ಸ್ ಆಗಿದೆ.ಇದರಿಂದ ಅಭಿಮಾನಿಗಳು ಕೊಂಚ ಬೇಸರವಾಗಿದ್ದು ಟ್ವಿಟರ್ ನಲ್ಲಿ #Disappointment ಟ್ವೀಟ್ ಸದ್ಯಕ್ಕೆ ಮುನ್ನಡೆಯಲ್ಲಿದೆ.
ಸಲಾರ್’ ಸಿನಿಮಾ ಘೋಷಣೆ ಆಗಿದ್ದು 2020ರ ಡಿಸೆಂಬರ್ನಲ್ಲಿ. ಈ ಚಿತ್ರದ ಮುಹೂರ್ತದಲ್ಲಿ ಪ್ರಭಾಸ್, ಯಶ್ ಮೊದಲಾದವರು ಭಾಗಿ ಆಗಿದ್ದರು.
ಅದ್ಯಾಕೋ ಬೆನ್ನು ಬಿದ್ದ ಬೇತಾಳದಂತೆ ಡಾರ್ಲಿಂಗ್ ಪ್ರಭಾಸ್ ಭೀತಿ ಬೆನ್ನು ಬಿದ್ದ ಬೇತಾಳದಂತೆ ಕಾಡುತ್ತಿದೆ.ಹೀಗಿರುವಾಗಲೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಸಲಾರ್ ಟೀಸರ್ ಒಂದು ಕಡೆ ಸೋತಿದೆ
ಪ್ರಭಾಸ್ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಹೀಗಾಗಿ, ‘ಸಲಾರ್’ ಟೀಸರ್ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಅಂದುಕೊಂಡ ರೀತಿಯಲ್ಲಿ ಈ ಟೀಸರ್ ಬಂದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
‘ಕೆಜಿಎಫ್ 2’ ಚಿತ್ರದ ಟೀಸರ್ ರಿಲೀಸ್ ಆದಾಗ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಕಂಡಿತ್ತು. ಆದರೆ, ಮುಂಜಾನೇ ‘ಸಲಾರ್’ ಟೀಸರ್ ರಿಲೀಸ್ ಆದ ಕಾರಣಕ್ಕೋ ಏನೋ ಈ ವಿಡಿಯೋ ಬಿಡುಗಡೆ ಆಗಿ ಎರಡು ಗಂಟೆಗೆ ಕೇವಲ 1 ಮಿಲಿಯನ್ ವೀಕ್ಷಣೆ ಕಂಡಿದೆ.
ಟೀನು ಆನಂದ್ ನಿರೂಪಣೆಯಲ್ಲಿ ‘ಸಲಾರ್’ ಟೀಸರ್ ಮೂಡಿಬಂದಿದೆ. ಆರಂಭದಿಂದ ಕೊನೆಯವರೆಗೂ ಅವರೇ ಹೈಲೈಟ್ ಆಗುತ್ತಾರೆ.
ಸೆಪ್ಟೆಂಬರ್ 28ಕ್ಕೆ ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಶ್ರುತಿ ಹಾಸನ್ ಅವರು ಈ ಚಿತ್ರಕ್ಕೆ ನಾಯಕಿ. ಪೃಥ್ವಿರಾಜ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್