ಭಾರತೀಯ ಚಿತ್ರರಂಗದ ದುಬಾರಿ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಲೈಕಾ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ. ಇಂಡಿಯನ್, ಖೈದಿ-150, ವಡಾ ಚೆನ್ನೈ, ದರ್ಬಾರ್, ಪೊನ್ನಿಯಿನ್ ಸೆಲ್ವನ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಇಂಡಿಯನ್-2, ರಜನಿ ಜೊತೆ ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳಿಗೆ ಹಣ ಸುರಿದಿರುವ ಸುಭಾಷ್ ಕರಣ್ ಈಗ ಸೆನ್ಸೇಷನಲ್ ಮೂವೀ 2018 ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ.
ಲೈಕಾ ಬರೀ ಸೂಪರ್ ಸ್ಟಾರ್ಸ್ ಸಿನಿಮಾಗಳನ್ನು ಮಾತ್ರವಲ್ಲ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿಕೊಡುತ್ತಿದೆ. ಮೋಸ್ಟ್ ಹ್ಯಾಪನಿಂಗ್ ಡೈರೆಕ್ಟರ್ ಜೂಡಾ ಆಂಥನಿ ಜೋಸೆಫ್ ಜೊತೆ ಸಿನಿಮಾ ಮಾಡುವುದಾಗಿ ಲೈಕಾ ಅನೌನ್ಸ್ ಮಾಡಿದೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿದ್ದು, ಜೂಡಾ ಆಂಥನಿ ಜೋಸೆಫ್..ಇದೇ ನಿರ್ದೇಶಕರಿಗೆ ಈಗ ಲೈಕಾ ಸಿನಿಮಾ ಮಾಡುತ್ತಿವೆ. ಶೀಘ್ರದಲ್ಲಿಯೇ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಅಪ್ ಡೇಟ್ ನೀಡಲಿದೆ ಲೈಕಾ..
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್