ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಭರ್ಜರಿ ತಯಾರಿ ನಡೆದಿದೆ…ರಾಜಸ್ಥಾನದ ಐಷಾರಾಮಿ ಹೋಟೆಲ್ ನಲ್ಲಿ ಮದುವೆ ನಡೆಯಲಿದ್ದು ವಿಕ್ಕಿ ಹಾಗೂ ಕ್ಯಾಟ್ ಕೋರ್ಟ್ ಮ್ಯಾರೆಜ್ ಆಗಲಿದ್ದಾರಂತೆ …
ಕೋರ್ಟ್ ಮ್ಯಾರೇಜ್’ ಮತ್ತು ಮದುವೆ ನೋಂದಣಿಗೂ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್ ಎಂದರೆ ಸಂಪ್ರದಾಯ ಬದ್ಧವಾಗಿಯೇ ಮದುವೆ ನಡೆಯುತ್ತದೆ. ಮದುವೆಯಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಸಾಕ್ಷಿಗಳಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ.
ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಬರುವ ಅಥಿತಿಗಳು ಮೊಬೈಲ್ ತರುವಂತಿಲ್ಲವಂತೆ ..ಕಾರಣ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಫೋಟೋಗಳು ಹರಿದಾಡುವುದು ವಿಕ್ಕಿ ಕೌಶಲ್ ಹಾಗೂ ಕತ್ರಿನಾಗೆ ಇಷ್ಟವಿಲ್ಲವಂತೆ…
ಮದುವೆಯ ಸ್ಥಳದ ವಿಚಾರದಲ್ಲಿಯೂ ಈ ಜೋಡಿ ಗೌಪ್ಯತೆ ಕಾಪಾಡಿಕೊಂಡಿದ್ದು ಈಗಾಗಲೇ ಮುಂಬೈನಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿ ಮಾಡಿದ್ದಾರಂತೆ ..ಇನ್ನು ಹಿಂದು ಹಾಗೂ ಮುಸ್ಲಿಂ ಎರಡು ಸಂಪ್ರದಾಯದಲ್ಲಿ ಮದುವೆ ನಡೆಯಲಿದೆ..ಈ ತಾರಾ ಜೋಡಿಯ ಮದುವೆ ಹೇಗಿರಲಿದೆ ಅನ್ನೂ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ…