Karnataka Bhagya
Blog

ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ.

ಮತಗಳ್ಳನ ತಡೆಯುವಲ್ಲಿ ಚುನಾವಣಾ ಆಯೋಗ ವಿಫಲ : ಸಚಿವ ದರ್ಶನಾಪುರ ಆರೋಪ.

ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ.

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಸಂವಿಧಾನದ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆಯಾಗಿದ್ದರೂ ಮತಗಳ್ಳನ ತಡೆಯುವಲ್ಲಿ ವಿಫಲವಾಗಿದ್ದು ಪ್ರಜಾಪ್ರಭುತ್ವದ ದುರಂತವೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಗಾಂಧಿ ಸರ್ಕಲ್ ನಲ್ಲಿ ಜಿಲ್ಲಾ‌ ಕಾಂಗ್ರೆಸ್ ಕಮಿಟಿ ಭಾನುವಾರ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಇಲ್ಲಿ ಜನರ ಮತಗಳಿಂದಲೇ ಜನಪ್ರತಿನಿಧಿಯಾಗುವ ಅವಕಾಶಕ್ಕೆ ಮತದಾನ ನಡೆಯುತ್ತದೆ.‌ ಇದು ಚಾಚು ತಪ್ಪದಂತೇ ಪ್ರಮಾಣಿಕ ಮತ್ತು ನಿರ್ಭಯವಾಗಿ ನಡೆಸಿಕೊಂಡು ಹೋಗುವುದೇ ಚುನಾವಣಾ ಆಯೋಗ. ಆದರೇ ರಾಜ್ಯ ಸೇರಿದಂತೆಯೇ ದೇಶದ ಎಲ್ಲಡೇ ಕಳ್ಳತನದ ಮತಗಳು ಸೇರಿಸಿ ಚುನಾವಣೆ ನಡೆದು ಜನ ವಿರೋಧಿ ಅಭ್ಯೆರ್ಥಿಗಳು ಆಯ್ಕೆಯಾಗುವ ಮೂಲಕ ಪ್ರಜಾತಂತ್ರದ ವ್ಯವಸ್ಥೆಯೇ ಬುಡಮೇಲು ಮಾಡುವಲ್ಲಿ‌ ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಆರೋಪಿಸಿದರು.
ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಮತಗಳನ್ನು ಕಾನೂನು ಬಾಹಿರವಾಗಿ ಸೇರಿಸಲಾಗಿದೆ. ಇದನ್ನೇ ನಮ್ಮ ನಾಯಕ ರಾಹುಲ್ ಗಾಂಧಿ ವಿರೋಧಿಸಿ ದೇಶದ ಎಲ್ಲಡೆ ಹೋರಾಟದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ಈಗಲೂ ಸಹ ನಾವು ಸಹಿ ಸಂಗ್ರಹ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಇದನ್ನು ಮನವರಿಕೆ ಮಾಡಿಕೊಡಲು ಪಕ್ಷ ಈ ಅಭಿಯಾನ ಹಮ್ಮಿಕೊಂಡಿದೆ ಎಂದು ಸಚಿವರು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳೆಯಪ್ಪನ್ ಮಾತನಾಡಿ, ದೇಶದಲ್ಲಿ ಬಿಜೆಪಿ ಮತಗಳ್ಳನ ಮಾಡುವ‌ ಮೂಲಕ ನೈಜ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿ ಚುನಾವಣೆ ವ್ಯವಸ್ಥೆ ವಿರುದ್ದವೇ ಗೆದ್ದಿರುವುದು ದುರಂತವೇ ಸರಿ ಎಂದರು.
ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ತನ್ನ ಕರ್ತವ್ಯ ನಿಭಾಯಿಸುವಲ್ಲಿ‌ ವಿಫಲವಾದರೂ ಏನು ನಡೆದಿಲ್ಲ ಎಂದು ಹೇಳುವ ಮೂಲಕ ಕೇಂದ್ರದ ಕೈಗೊಂಬೆಯಂತೆಯೇ ವರ್ತಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇಂತಹ ದೊಡ್ಡ ತಪ್ಪನ್ನು ನಮ್ಮ ನಾಯಕ ರಾಹುಲ್ ಗಾಂಧಿ ಪತ್ತೆಹಚ್ಚಿ ಇದರ ವಿರುದ್ಧ ದೇಶದ ಎಲ್ಲಡೆ ತಿಳಿಸಿ, ಜನರಲ್ಲಿ ಅರಿವು ಮಾಡಿಸುವ ಮಹತ್ವದ ಕೆಲಸ ಮಾಡಿದ್ದಾರೆಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಎಂಎಲ್ ಸಿ ವಸಂತಕುಮಾರ ಮಾತನಾಡಿ, ಇದೊಂದು ಪ್ರಜಾಪ್ರಭುತ್ವದ ವಿರೋಧಿ ಕೆಲಸ.‌ಸಂವಿಧಾನಕ್ಕೆ ಮಾಡಿದ ಅಪಚಾರವೆಂದು‌ ಜರಿದರು. ಇದನ್ನು ಕಾಂಗ್ರೆಸ್ ಪಕ್ಷದ ಬಯಲಿಗೆಳೆದು ದೇಶದ ಜನರಲ್ಲಿ ಸತ್ಯ,ಅಸತ್ಯದ ದರ್ಶನ ಮಾಡಿಸುತ್ತಿದೆ ಎಂದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಬಿಜೆಪಿಯವರು ಮಾಡಿದ ಮತಗಳ್ಳನದಿಂದಾಗಿ ನಮ್ಮ ಅಭ್ಯರ್ಥಿಗಳು ಬಹಳ ಕಡೆ ಸೋಲುಂಡರು. ಮತ ಹಾಕಲು ಒಂದೇ ಕಡೆ ಹೆಸರು ಇರಬೇಕೆಂಬ ನಿಯಮ ಕಟ್ಟುನಿಟ್ಟಾಗಿ ಇದ್ದರೂ ಇದನ್ನು ಆಯೋಗ ತಡೆಯುವಲ್ಲಿ‌ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪೂರ್,
ನಿಜ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗದದ ಅಧ್ಯಕ್ಷ ಬಾಬುರಾವ ಚಿಂಚನಸೂರ್, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಸ್ಸುಗೌಡ ಬಿಳ್ಹಾರ್, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಲ್ಲಮ್ಮ ಕೋಮಾರ್, ಡಾ.ಶರಣ ಕಾಮರೆಡ್ಡಿ, ವೆಂಕಟರೆಡ್ಡಿ ವನಕೇರಿ, ಚನ್ನಕೇಶವ ಬಾಣತಿಹಾಳ, ಗಣೇಶ ದುಪ್ಪಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ಮಲ್ಲಿಕಾರ್ಜುನ ಈಟೆ,ಸಾಬಣ್ಣಾ ಕೆಂಗೂರಿ, ಅನೀಲ ಹೆಡಗಿಮದ್ರಿ ಸೇರಿದಂತೆಯೇ ಇತರರಿದ್ದರು.
ಜಿಲ್ಲಾ ವಕ್ತಾರ

ಶ್ಯಾಮಸನ್ ಮಾಳಿಕೇರಿ ನಿರೂಪಿಸಿದರು. ಪಕ್ಷದ ಸೇವಾದಳದ ಪದಾಧಿಕಾರಿಗಳಾದ ಪ್ರತಾಪ ಚವ್ಹಾಣ, ಲಕ್ಷ್ಮಣ ರಾಠೋಡ್ ಅವರು ವಂದೇ ಮಾತರಂ ಹಾಡಿದರು.

Related posts

ಪರಭಾಷೆಯಲ್ಲೂ ಕನ್ನಡದ ಹೆಮ್ಮೆ ‘ಕನ್ನಡತಿ’

Nikita Agrawal

ಡಾಲಿಯ ಹೊಸ ಸಿನಿಮಾ ಇದೀಗ ಒಟಿಟಿಗೆ.

Nikita Agrawal

ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್‌ ನಟನೆಯಲ್ಲಿ ಬ್ಯುಸಿ

Nikita Agrawal

Leave a Comment

Share via
Copy link
Powered by Social Snap