Karnataka Bhagya

ಸರ್ಕಾರದಿಂದ ಬೀಜಗಳ ಬೆಲೆ ಹೆಚ್ಚಳ : ಮಲ್ಲಣ್ಣಗೌಡ ಹಗರಟಗಿ ವಿರೋಧ

ಸರ್ಕಾರದಿಂದ ಬೀಜಗಳ ಬೆಲೆ ಹೆಚ್ಚಳ : ಮಲ್ಲಣ್ಣಗೌಡ ಹಗರಟಗಿ ವಿರೋಧ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಹತ್ತಿ ತೊಗರಿ ಹೆಸರು ಉದ್ದು  ಹಾಗೂ ಇನ್ನಿತರ ಬಿತ್ತನೆ ಬೀಜಗಳ ಬೆಲೆಯನ್ನು ಶೇಕಡ ೬೦.ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಸರಕಾರವು ಬೀಜ ಗೊಬ್ಬರಗಳ ಬೆಲೆಯು ಗಗನಕ್ಕೇರಿಸಿದ್ದರಿಂದ ಸರಕಾರ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿದೆ ಈಗಾಗಲೇ ಮುಂಗಾರು ಆರಂಭವಾಗಿರುವುದರಿAದ ರೈತರು ಬೀಜ ಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ ಆದರೆ ಕೆಲವು ಕಡೆ ಕಳಪೆ ಬೀಜ ಗೊಬ್ಬರದ ಹಾವಳಿ ಹೆಚ್ಚಾಗಿದೆ ಮತ್ತು ನೆರೆಯ ಆಂಧ್ರದಿAದ ಕಳಪೆ ಮಟ್ಟದ ಹತ್ತಿ ಬೀಜಗಳು ಕರ್ನಾಟಕಕ್ಕೆ ಲಗ್ಗೆ ಇಟ್ಟಿವೆ ಆದರೆ ಸಂಬAಧಿಸಿದ ಕೃಷಿ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರವು ರೈತ ಸಂಪರ್ಕ ಕೇಂದ್ರದಿAದ ಕಡಿಮೆ ದರದಲ್ಲಿ ಗೊಬ್ಬರ ಬೀಜಗಳನ್ನು ವಿತರಿಸಬೇಕು ಮತ್ತು ಕಳಪೆ ಬೀಜ ಗೊಬ್ಬರದ ಹಾವಳಿಯನ್ನು ತಡೆಯುವ ಜೊತೆಗೆ ಸಮರ್ಪಕ ಬೀಜ ಗೊಬ್ಬರಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಗುರುನಾಥ್ ರೆಡ್ಡಿ ಹದನೂರ, ಜಿಲ್ಲಾ ಉಪಾಧ್ಯಕ್ಷ ವೆಂಕೋಬ ಕಟ್ಟಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ, ಶಹಾಪುರ ತಾಲೂಕ ಅಧ್ಯಕ್ಷ ದೇವೇಂದ್ರಪ್ಪ ಶಿರವಾಳ, ಯಾದಗಿರಿ ತಾಲೂಕು ಅಧ್ಯಕ್ಷ ಮೈಹಿಪಾಲ ರೆಡ್ಡಿ ಪಾಟೀಲ, ಹುಡುಗಿಯರ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ ಹಾಗೂ ಇನ್ನಿತರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ

ಸರ್ಕಾರದಿಂದ ಬೀಜಗಳ ಬೆಲೆ ಹೆಚ್ಚಳ : ಮಲ್ಲಣ್ಣಗೌಡ ಹಗರಟಗಿ ವಿರೋಧ

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap