ಮೌಲ್ಯಯುತ ಬದುಕಿಗೆ ಬಸವಣ್ಣನೇ ಸಿದ್ಧಾಂತ: ಮಹಿಪಾಲರೆಡ್ಡಿ ಮುನ್ನೂರ
ಕರ್ನಾಟಕ ಭಾಗ್ಯ ವಾರ್ತೆ ಸೇಡಂ,
ಮೌಲ್ಯಯುತವಾದ ಬದುಕನ್ನು ಸಾಗಿಸುವುದಕ್ಕೆ ವಚನ ಸಾಹಿತ್ಯದ ಸಿದ್ಧಾಂತಗಳನ್ನು ಸಮೃದ್ಧಿಯಾಗಿ ಕೊಟ್ಟಿರುವ ಬಸವಣ್ಣನವರೇ ಆದರ್ಶ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಭಿಪ್ರಾಯಪಟ್ಟರು.
ಪಟ್ಟಣದ ರಾಮಚಂದ್ರ ಬಡಾವಣೆಯಲ್ಲಿರುವ ಶಿಕ್ಷಕ ನೀಲಕಂಠ ಮುತ್ತಗಿ ಅವರ ನಿಲಯದಲ್ಲಿ ತಾಲೂಕು ಬಸವ ಕೇಂದ್ರ ಆಯೋಜಿಸಿದ್ದ ೧೧೭ ನೇ ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ
ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮಾಜಿಕ, ವೈಚಾರಿಕ ಹಾಗೂ ಸ್ತಿçà ಸಮಾನತೆ ಸೇರಿದಂತೆ ಬದುಕಿನ ವಿವಿಧ ಮಜಲುಗಳ ಬಗ್ಗೆ ವಚನ ಸಾಹಿತ್ಯದಿಂದ ಸ್ಪಷ್ಟವಾದ ಸಿದ್ಧಾಂತಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕನ್ನು ಪ್ರಫುಲ್ಲಗೊಳಿಸಿದಂತಾಗುತ್ತದೆ ಎಂದು ಹೇಳಿದರು.
`ಇವನಾರವ ಇವನಾರವ ಎನ್ನುವುದಕ್ಕಿಂತ ನಮ್ಮವ ಎನ್ನುವುದರಲ್ಲಿ ಸಕಾರಾತ್ಮಕ ಭಾವನೆಯಿದೆ. ಇದು ಬದುಕನ್ನು ಶ್ರೀಮಂತಿಕೆಯ ಕಡೆಗೆ ಕೊಂಡೊಯ್ಯುತ್ತದೆ. ನಕಾರಾತ್ಮಕ ಭಾವನೆಯಿಂದ ಜೀವನ ಸುಧಾರಣೆಯಾಗುವುದಿಲ್ಲ. ಪಾಸಿಟಿವ್ ಚಿಂತನೆಗಳಿAದ ಬದುಕಿನಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದು ಮಹಿಪಾಲರೆಡ್ಡಿ ಹೇಳಿದರು.
ಕಾರ್ಯಕಮದ ದಾಸೋಹಿಗಳಾದ ಜ್ಯೋತಿ ನೀಲಕಂಠ ಮುತ್ತಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಗತಿಪರ ರೈತ, ಶಿಕ್ಷಣ ಪ್ರೇಮಿ ಅನಂತರೆಡ್ಡಿ ಪಾಟೀಲ ಹಾಶನಪಲ್ಲಿ, ಗೌಡನಹಳ್ಳಿಯ ಚಿರಂಜೀವಿರೆಡ್ಡಿ ಮಾಲಿಪಾಟೀಲ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಬಸವ ಕೇಂದ್ರದ ಉಪಾಧ್ಯಕ್ಷ ರಾಚಣ್ಣ ಬಳಗಾರ ಅಧ್ಯಕ್ಷತೆ ವಹಿಸಿದ್ದರು. ಬಸವ ಪುರಸ್ಕಾರ ಪಡೆದ ಹಿನ್ನೆಲೆಯಲ್ಲಿ ಲೇಖಕ ಮಹಿಪಾಲರೆಡ್ಡಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ನಿವೃತ್ತ ಸರಕಾರಿ ನೌಕರ ಸಂಘದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕಲಬುರಗಿ ರಂಗಾಯಣ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ, ನ್ಯಾಯವಾದಿ ಶರಣಬಸಪ್ಪ ಹಾಗರಗಿ, ವೀರಭದ್ರಯ್ಯ ಸ್ವಾಮಿ, ಶಂಭುರೆಡ್ಡಿ ಮದ್ನಿ ಕೋಡ್ಲಾ, ಬಸವತೀರ್ಥಪ್ಪ ಕಾಚೂರ, ಜಗದೀಶ ಕಡಬಗಾಂವ, ಸಂತೋಷ ತೊಟ್ನಳ್ಳಿ, ಪ್ರಕಾಶ ಗೊಣಗಿ, ಬಸವವಂತಪ್ಪ ಕೋದಂಪೂರ, ವೆಂಕಟರೆಡ್ಡಿ ಮೊಕಾಶಿ, ವೀರಣ್ಣ ಅವಂಟಿ, ವೀರಣ್ಣ ಕೋಲಕುಂದಾ, ಜನಾರ್ಧನರೆಡ್ಡಿ ತುಳೇರ, ಆರತಿ ಕಡಗಂಚಿ, ಅಮರಮ್ಮ ಪಾಟೀಲ ಇತರರು ಭಾಗವಹಿಸಿದ್ದರು. ನೀಲಕಂಠ ಮುತ್ತಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಮೂರ್ತಿ ಕಾಚೂರ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಬಸವರಾಜ ಬಾಳಿ ಕಾರ್ಯಕ್ರಮ ನಿರೂಪಿಸಿದರು.