ರಕ್ಷಿತ್ ಶೆಟ್ಟಿ ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಪ್ರಸೆಂಟ್ ಮಾಡುತ್ತಿದ್ದಾರೆ. ಹಾಸ್ಟೆಲ್ ಒಳಗೆ ಒಂದು ರಾತ್ರಿ ನಡೆಯುವ ಕಥೆ ಇದಾಗಿದೆ.ಇದೇ ತಿಂಗಳ ಜುಲೈ 21ರಂದು ಈ ಚಿತ್ರ ರಿಲೀಸ್ ಆಗಲಿದೆ. ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್ ಮಂಚಾಲೆ, ಪವನ್ ಕುಮಾರ್, ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಹಾಸ್ಟೆಲ್ ಹುಡುಗರ ಗಲಾಟೆ ಯಾಕೋ ಜಾಸ್ತೀ ಆಗ್ತಿದೆ ಮೊದ್ಲು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತಾ ಪ್ರೇಕ್ಷಕ ಪ್ರಿಯರು ಕಾಯ್ತಿದ್ದಾರೆ.
ನಿತಿನ್ ಕೃಷ್ಣಮೂರ್ತಿ ಆ್ಯಕ್ಷನ್-ಕಟ್ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾವನ್ನು ಈಗಾಗಲೇ ಎರಡು ಬಾರಿ ನೋಡಿದ್ದಾರೆ. ಪ್ರೀಮಿಯರ್ ಶೋ ದಿನ ಮತ್ತೊಮ್ಮೆ ನೋಡುವುದಾಗಿ ತಿಳಿಸಿದ್ದಾರೆ. ‘ಕನ್ನಡದಲ್ಲಿ ನಾವು ಇಂಥ ಸಿನಿಮಾ ಮಾಡಿದ್ದೇವೆ ಎಂಬುದು ಹೆಮ್ಮೆ. ಕನ್ನಡ ಚಿತ್ರರಂಗಕ್ಕೆ ಭರವಸೆಯ ತಂತ್ರಜ್ಞರು ಸಿಕ್ಕಿದ್ದಾರೆ. ನೀವೆಲ್ಲ ಈ ಸಿನಿಮಾವನ್ನು ತುಂಬ ಎಂಜಾಯ್ ಮಾಡುತ್ತೀರಿ. ತುಂಬ ಕಾಮಿಡಿ ಇದೆ. ಯಾರಿಗೂ ನಿರಾಸೆ ಆಗಲ್ಲ. ಒಂಚೂರು ತರಲೆ ಡೈಲಾಗ್ ಇರಬಹುದು. ಆದರೂ ಇದು ಫ್ಯಾಮಿಲಿ ಸಿನಿಮಾ. ಕಾಲೇಜು ಹುಡುಗರು ಮೊದಲು ಈ ಸಿನಿಮಾ ನೋಡುತ್ತಾರೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್