‘ಕನ್ನಡ ಜ್ಯೋತಿ ರಥ ರಥಯಾತ್ರೆಗೆ ಅದ್ದೂರಿ ಸ್ವಾಗತ
ಕರ್ನಾಟಕ ಭಾಗ್ಯ ವಾರ್ತೆ
ಹುಣಸಗಿ: ಮಂಡ್ಯ ಜಿಲ್ಲೆಯಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜನರಲ್ಲಿ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಕನ್ನಡ ಜ್ಯೋತಿ ರಥ ಯಾತೆ’್ರಗೆ ಮಂಗಳವಾರ ಹುಣಸಗಿ ಪಟ್ಟಣದಲ್ಲಿ ಭರ್ಜರಿ ಸಂಭ್ರಮದೊAದಿಗೆ ಸ್ವಾಗತಿಸಲಾಯಿತು.
ಕೆಂಭಾವಿಯಿAದ ಆಗಮಿಸಿದ ರಥಯಾತ್ರೆಯು ಪಟ್ಟಣದ ಮಹಾಂತಸ್ವಾಮಿ ವೃತ್ತದ ಮೂಲಕ ಪ್ರವೇಶಿಸಿತು. ಮಹಿಳೆಯರು, ಹಿರಿಯರು ಸೇರಿದಂತೆ ನೆರೆದಿದ್ದ ಎಲ್ಲ ವರ್ಗದ ನೂರಾರು ಜನರು ರಥ ಆಗಮಿಸಿಸುತ್ತಿದ್ದಂತೆ ಕೇಕೆ ಹಾಕಿ ಖುಷಿಯಿಂದ ಸಂಭ್ರಮಿಸಿದರು. ಬಳಿಕ ರಥಕ್ಕೆ ಸಂಪ್ರದಾಯದAತೆ ವಿಧಿವತ್ತಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ ಮಾತನಾಡುತ್ತ ಡಿಸೆಂಬರ್ ೨೦ ರಿಂದ ಮೂರು ದಿನಗಳ ಕಾಲ ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿ, ಕನ್ನಡ ಭಾಷೆ ನೆಲ,ಜಲ ಸಂಸ್ಕೃತಿ ಕುರಿತಂತೆ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಈ ನುಡಿ ಜಾತ್ರೆಗೆ ರಾಜ್ಯದ ಎಲ್ಲ ಗ್ರಾಮಗಳಿಂದಲೂಈ ಜನರು ಭಾಗವಹಿಸಿ ಕನ್ನಡ ಕಹಳೆ ಮೊಳಗಿಸುವ ಕಾರ್ಯ ನಡೆಯಲಿ ಎಂಬುದೆÀ ಈ ‘ ಕನ್ನಡ ಜ್ಯೋತಿ ರಥ ಯಾತ್ರೆಯ ಸದುದ್ದೇಶವಾಗಿದೆ ಎಂದರು. ಯಾದಗಿರಿ ಜಿಲ್ಲೆಯಾದ್ಯಂತ ಈ ರಥಯಾತ್ರೆಗೆ ಸಮುದಾಯದವರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಎಲ್ಲ ಕಡೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಮಹಾಂತಸ್ವಾಮಿ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೂ ಎಲ್ಲಡೆ ಕನ್ನಡದ ಬಾವುಟಗಳು ರಾರಾಜಿಸಿದÀವು. ಡೊಳ್ಳು ವಾದನಕ್ಕೆ ತಕ್ಕಂತೆ ಯುವಕರು ಕನ್ನಡ ಧ್ವಜ ಹಿಡಿದು ನರ್ತನ ಮಾಡಿ ಸಂಭ್ರಮಿಸಿದರು. ಮೆರವಣಿಗೆಯುದ್ಧಕ್ಕೂ ಮಹಿಳೆಯರು ಸೇರಿದಂತೆ ಎಲ್ಲರೂ ಕನ್ನಡದ ಹಿರಿಮೆ ಗರಿಮೆಯನ್ನು ಸಾರುವ ಘೋಷಣೆಗಳನ್ನು ಮೊಳಗಿಸಿ ಕನ್ನಡ ಪ್ರೇಮ ಮೆರೆದರು. ಭಾಗವಹಿಸಿದ್ದ ಎಲ್ಲರೂ ತಮ್ಮವರೊಂದಿಗೆ ರಥದೊಂದಿಗೆ ಫೊಟೊ ತೆಗೆಸಿಕೊಂಡು ಖುಷಿಪಡುತ್ತಿದ್ದುದು ಸಾಮಾನ್ಯವಾಗಿತ್ತು. ಮಾರ್ಗದ ಹಲವು ಕಡೆಗಳಲ್ಲಿ ರಥದಲ್ಲಿನ ಕನ್ನಡ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಕನ್ನಡ ಜೋತಿ ರಥಯಾತ್ರೆಯು ಡೊಳ್ಳು ವಾದ್ಯದೊಂದಿಗೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹುಣಸಗಿಯ ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ,ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯ್ಕ ರಾಠೋಡ, ಪ.ಪಂ.ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಪ.ಪಂ ಮುಖ್ಯಾಧಿಕಾರಿ ಸಿದ್ಧರಾಮೇಶ್ವರ, ಪ್ರಕಾಶ ಅಂಗಡಿ ಕನ್ನೆಳ್ಳಿ, ಹಿರಿಯರಾದ ಬಿ.ಎಲ್ ಹಿರೇಮಠ, ಮುಖಂಡರಾದ ಸಿದ್ಧಣ್ಣ ಮಲಗಲದಿನ್ನಿ, ಚಂದ್ರಶೇಖರ ದಂಡಿನ, ಬಾಪುಗೌq ಪಾಟೀಲ್, ಬಸವರಾಜ್ ಮಲಗಲದಿನ್ನಿ, ಹೊನ್ನಪ್ಪ ದೇಸಾಯಿ,ಭೀಮನಗೌಡ ಕುಪ್ಪಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣು ದಂಡಿನ್, ಸಿದ್ಧು ಮುದಗಲ್, ಮಲ್ಲಣ್ಣ ಬಾಕಲಿ,ಕಾಶೀಂಸಾಬ್, ತಾ.ಪಂ.ಇಒ ಬಸವರಾಜ ಸಜ್ಜನ್, ಮೇಲಪ್ಪ ಗುಳಗಿ,ನೀಲಕಂಠ ಹೊನಕಲ್, ಶಿವಕುಮಾರ ಬಂಡೋಳಿ,ನಾಗನಗೌಡ ಪಾಟೀಲ್, ಆರ್.ಎಲ್ ಸುಣಗಾರ, ಅಬ್ದುಲ್ ಸುಭಾನ ಅಲಿ ಡೆಕ್ಕನ್, ಮಂಜುನಾಥ ಎಸ್.ಬಳಿ, ಮಹಾದೇವಿ ಬೇನಾಳಮಠ, ಮಶಾಕ ಯಾಳಗಿ,ಗುರು ಹುಲಕಲ್,ಕಾಂತೇಶ,ಹೊನ್ನಕೇಶವ ದೇಸಾಯಿ,ನಂದಪ್ಪ ಪೀರಾಪುರ,ಬಸವರಾಜ ತೆಗ್ಗೆಳ್ಳಿ,ಬಸವರಾಜ ಕೋಳ್ಕೂರ,ವೆಂಕನಗೌಡ ಅರಿಕೇರಿ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ನಿಂಗನಗೌಡ ಪಾಟೀಲ್, ಎಸ್.ಕೆ ಶಿಕ್ಷಣ ಸಂಸ್ಥೆಯ ವಿಜಯಕುಮಾರ ದೇಸಾಯಿ, ಸಹಜಯೋಗದ ಅಯ್ಯನಗೌಡ ಬನ್ನೀಬಸವ ಮತ್ತು ಕಸಾಪದ ವಿವಿಧ ಪದಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಶಿಕ್ಷಕ, ಶಿಕ್ಷಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಮುದಾಯದ ಪ್ರಮುಖರು ಹಾಗೂ ಕನ್ನಡಪರ ಸಂಘಟನೆಯ ಬಸವರಾಜ ಚನ್ನೂರ, ಪ್ರಭುಗೌಡ ಪೋತರಡ್ಡಿ ಮುದನೂರ,ಮತ್ತು ಪದಾಧಿಕಾರಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.