26.2 C
Bengaluru
March 28, 2026
Karnataka Bhagya
ಕರ್ನಾಟಕ

ವನಮಹೋತ್ಸವ ಬ್ಯಾನರ್‌ನಲ್ಲಿ ಶಾಸಕರನ್ನೇ ಕೈಬಿಟ್ಟಾರಲ್ರಿ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಎಡವಟ್ಟು ಮಾಡಿಕೊಂಡ ಅರಣ್ಯ ಇಲಾಖೆ. ಸೋಮವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ -೨೦೨೫ ಕರ‍್ಯಕ್ರಮದಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ಜಿಲ್ಲೆಯ ಶಾಸಕರ ಭಾವಚಿತ್ರಗಳೇ ಇರಲಿಲ್ಲ. ಹಾಗೇ ಹಾಕಿದ್ದ ಬ್ಯಾನರ್ ಯಡಿಯೇ ಅರಣ್ಯ ಸಚಿವರು ಬಂದು ಕರ‍್ಯಕ್ರಮ ಮಾಡುವವರಿದ್ದರು. ಅಷ್ಟರಲ್ಲಿಯೇ ಕುಂಬಕರ‍್ಣನ ನಿದ್ದೆಯಿಂದ ಅರಣ್ಯ ಅಧಿಕಾರಿಗಳು ಎದ್ದೋ,ಬಿದ್ದೋ ಎಂಬಂತೆಯೇ ಓಡಿ ಹೋಗಿ ಕೈಬಿಟ್ಟ ಇಬ್ಬರ ಶಾಸಕರು ಇರುವ ಸಣ್ಣದೊಂದು ಬ್ಯಾನರ್ ಮಾಡಿಕೊಂಡು ಬಂದು ಸಾವಿರಾರು ಮಂದಿ ಮುಂದೆ ಏಣಿ ಇಟ್ಟು ಆ ಬ್ಯಾನರ್ ಕಟ್ಟುವ ಮೂಲಕ ತಾವು ಮಾಡಿದ ತಪ್ಪನ್ನು ತಾವೇ ಬಹಿರಂಗ ಮಾಡಿಕೊಳ್ಳುವ ಮೂಲಕ ಅಪಹಾಸ್ಯಕ್ಕೆ ಗುರಿಯಾದರು.
ನಾಲ್ಕು ಜನ ಶಾಸಕರು ಇರುವ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕರ‍್ಯಕ್ರಮಕ್ಕಾಗಿ ಸಿದ್ದ ಪಡಿಸಿದ್ದ ಬ್ಯಾನರ್ ನಲ್ಲಿ ಸಿಎಂ,ಡಿಸಿಎಂ, ಅರಣ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಯಾದಗಿರಿ ಶಾಸಕರ ಭಾವಚಿತ್ರಗಳನ್ನು ಮಾತ್ರ ಹಾಕಿದ್ದನ್ನು ವೇದಿಕೆ ಹಿಂದೇ ದೊಡ್ಡದಾಗಿ ನೇತು ಹಾಕಿದ್ದ ಅರಣ್ಯ ಇಲಾಖೆಯವರಿಗೆ ಸುರಪುರ ಮತ್ತು ಗುರುಮಠಕಲ್ ಶಾಸಕರ ಭಾವಚಿತ್ರ ಹಾಕುವುದನ್ನೇ ಮರತೇ ಬಿಟ್ಟಿದ್ದರು. ಅದೇಗೋ ಕೊನೆ ಗಳಿಗೆಯಲ್ಲಿ ಗಮನಿಸಿ, ತಾಬುಡ್ ತುಬುಡ್ ಬಿಟ್ಟುಹೊದ ಶಾಸಕರ ಪೊಟೊ ಇರುವ ಬ್ಯಾನರ್ ತಂದು ಅದರ ಅಂಟಿಸಿದರು.
ಒಂದು ದೊಡ್ಡ ಇಲಾಖೆಯಾಗಿರುವ ಅರಣ್ಯ ಇಲಾಖೆಯಿಂದ ಆದ ಈ ಪ್ರಮಾದದ ಬಗ್ಗೆ ಸಭಿಕರು ತಮಗೆ ತಿಳಿದಂಗ ಮಾತುಗಳು ಆಡಿದ್ದು ಕೇಳಿಬಂದವು.

Related posts

ಚಾರ್ಲಿಗೆ ಮನಸೋತ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು ನೋಡಿ

Nikita Agrawal

ಸೀದಾ ಒಟಿಟಿಗೆ ಹೊರಡುತ್ತಿದ್ದಾರೆ ರಿಷಿ.

Nikita Agrawal

ದಿಲ್ ಖುಷ್ ಎಂದ ಸ್ಪಂದನಾ ಸೋಮಣ್ಣ

Nikita Agrawal

Leave a Comment

Share via
Copy link
Powered by Social Snap