Karnataka Bhagya
Blog

ನ್ಯಾಯ ನಿಷ್ಠುರ ನಡೆಯ ಮುತ್ಸದ್ದಿ ಶಾಮನೂರ : ರಾಚನಗೌಡ ಮುದ್ನಾಳ

ಶಾಮನೂರು ನ್ಯಾಯ ನಿಷ್ಠುರ ನಡೆಯ ಮುತ್ಸದ್ಧಿ:ರಾಚನಗೌಡ ಮುದ್ನಾಳ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಲಿಂಗಾಯತ ಸಮಾಜಕ್ಕೆ ಅನ್ಯಾಯವಾದಾಗಲೆಲ್ಲ ಗಟ್ಟಿ ದನಿಯಲ್ಲಿ ಯಾರ ಮರ್ಜಿಗೂ ಕಾಯದೇ ಪ್ರತಿಭಟಿಸುವ ಮನೋಭಾವ ಶಾಮನೂರು ಶಿವಶಂಕರಪ್ಪ ಹೊಂದಿದ್ದರು ಎಂದು ವೀರಶೈವ ಸಮಾಜದ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ,ತಾಲ್ಲೂಕು ಘಟಕ ಹಾಗೂ ಯಾದಗಿರಿ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಸಂಜೆ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ ಶಾಮನೂರು ಅವರು ಎಂದೂ ಶ್ರೀಮಂತಿಕೆಯ ಅಹಂ ತೋರಿದವರಲ್ಲ.ಬಡವರು ಮತ್ತು ನಿರ್ಗತಿಕರ ಬಗ್ಗೆ ಅಪಾರ ಅನುಕಂಪ ಹೊಂದಿದ್ದ ಕೊಡುಗೈ ದಾನಿಯಾಗಿದ್ದರು.

ರಾಜಕಾರಣಕ್ಕಿಂತಲೂ ಸಮಾಜ ಮುಖ್ಯ ಎಂದು ತಿಳಿದು ಕೊನೆಯುಸಿರು ಇರುವವರೆಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜದ ಸಂಘಟನೆಗೆ ಶ್ರಮಿಸಿದ ಮಹನೀಯರಾಗಿದ್ದರು ಎಂದರು.

ಉದ್ಯಮಿ ಶರಣಪ್ಪಗೌಡ ಮಲ್ಹಾರ ಮಾತನಾಡಿ, ಸಮಾಜದ ಬಗ್ಗೆ ಅಪಾರ ಕಾಳಜಿಯಿದ್ದ ಹಿರಿಯ ನಾಯಕನನ್ನು ಕಳೆದುಕೊಂಡಿದ್ದು,ದುಃಖ ತಂದಿದ್ದು,ಅವರ ನೇರವಂತಿಕೆಯ ಕಾರಣದಿಂದಾಗಿ ನಾಡಿನಲ್ಲಿ ವೀರಶೈವ ಲಿಂಗಾಯತ ಸಮಾಜ ತನ್ನ ಘನತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು ಎಂದರು.

ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ,ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಗೊಂದಲ ಸೃಷ್ಟಿಸಿ ಧರ್ಮವಿಭಜನೆ ಮಾಡಲು ಹೊರಟಾಗ ಸ್ವಪಕ್ಷೀಯರು ಎಂಬುದನ್ನು ಮರೆತು ಖಂಡತುಂಡವಾಗಿ ವಿರೋಧಿಸಿ ಸಮಾಜದ ಒಗ್ಗಟ್ಟಿಗೆ ದಿಟ್ಟ ನಿಲುವು ತಾಳಿದವರಾಗಿದ್ದರು ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಮಾತನಾಡಿ ಶಾಮನೂರು ಅವರ ಜೀವನ ಮತ್ತು ಸಾಧನೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಒಂದು ನಿಮಿಷ ಮೌನಾಚರಣೆ ಮಾಡಿ ಭಾವಪೂರ್ಣವಾದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ, ಉಪಾಧ್ಯಕ್ಷೆ ಅನ್ನಪೂರ್ಣ ಸಿ ಪಾಟೀಲ, ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಕ್ಕಿ,ಅನ್ನಪೂರ್ಣ ಜವಳಿ,ಮಾಜಿ ಅಧ್ಯಕ್ಷ ಸೋಮಶೇಖರ್ ಮಣ್ಣೂರ,ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ,ತಾಲ್ಲೂಕು ಅಧ್ಯಕ್ಷ ರಾಜಶೇಖರ ಚಾಮನಹಳ್ಳಿ,ಮಲ್ಲು ಸ್ವಾಮಿ ಗುಡಿಮಠ,ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ, ರಮೇಶ ದೊಡ್ಡಮನಿ,ರಾಜು ಸ್ವಾಮಿ ಆನಂಪಲ್ಲಿ,ವಿಶ್ವನಾಥ ಕಾಜಗಾರ,ಅಯ್ಯಣ್ಣಗೌಡ ಕ್ಯಾಸಪ್ಪನಹಳ್ಳಿ,ರವೀಂದ್ರ ಜಾಕಾ,ಸೋಮಶೇಖರ್ ಗಣಪೂರ,ಶರಣಪ್ಪ ಜಾಕಾ,ವಿನಯ ರಾಕಾ,ಸಿದ್ದು ಪಾಟೀಲ,ಬಸ್ಸು ಪಾಟೀಲ ಕ್ಯಾತ್ನಾಳ,ನಾಗೇಂದ್ರ ಜಾಜಿ,ನೂರಂದಪ್ಪ ಲೇವಡಿ,ಶರಣು ಪಡಶಟ್ಟಿ,ಮಂಜುನಾಥ ಜಡಿ ಮಲ್ಲುಗೌಡ ತಳಕ,ಚಂದ್ರಶೇಖರ ಅರಳಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Related posts

ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ?

Nikita Agrawal

ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್

Nikita Agrawal

ಯೋಧರನ್ನ ಭೇಟಿ ಮಾಡಿದ ಜ್ಯೂ ರೆಬೆಲ್ ಸ್ಟಾರ್

Nikita Agrawal

Leave a Comment

Share via
Copy link
Powered by Social Snap