ಕಿಶನ್ ಬಿಳಿಗಲಿ ಕನ್ನಡಿಗರಿಗೇನೂ ಹೊಸಬರಲ್ಲ. ಡ್ಯಾನ್ಸ್ ದಿವಾನೆ ಎನ್ನುವ ಡ್ಯಾನ್ಸ್ ಶೋ ವಿನ್ನರ್ ಆಗಿದ್ದ ಕಿಶನ್ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ ಕನ್ನಡಿಗರ ಮನಗೆದ್ದರು. ಮಾತ್ರವಲ್ಲ ಕರ್ನಾಟಕದಾದ್ಯಂತ ಮನೆ ಮಾತಾದರು.
ವಿಸ್ಮಯಾ ಗೌಡ ನಿರ್ದೇಶನದ ಡಿಯರ್ ಕಣ್ಮಣಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿರುವ ಕಿಶನ್ ಬಿಳಗಲಿ
ಕನ್ನಡದ ಸೆನ್ಸೇಷನಲ್ ಸೆಲೆಬ್ರಿಟಿಗಳಲ್ಲಿ ಒಬ್ಬರೂ ಹೌದು. ಅಂದ ಹಾಗೇ ಕಿಶನ್ ಅವರ ಹಾದಿ ಸುಲಭದ ಹಾದಿಯಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ನಂತರವಷ್ಟೇ ಅವರು ಈ ಸ್ಥಾನವನ್ನು ಗಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಶನ್ ತನ್ನ ಯಶಸ್ಸಿನ ಹಾದಿಯ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಕೆರಿಯರ್ ನ ಚಿತ್ರಣವನ್ನು ಈ ವಿಡಿಯೋ ನೀಡಿದೆ. ಇದರೊಂದಿಗೆ ನೋಟ್ ಕೂಡಾ ಬರೆದುಕೊಂಡಿದ್ದಾರೆ.
“ಪಯಣ ಯಾವಾಗಲೂ ಮುಖ್ಯವಾದುದು ನಿಜ. ನಾನು ಇನ್ನೂ ಬಹಳಷ್ಟು ವಿಷಯಗಳಲ್ಲಿ ವಿಫಲವಾಗಿದ್ದು ನಿಜ. ಆದರೆ ಅದನ್ನು ಎಲ್ಲಿಯೂ ಯಾವತ್ತಿಗೂ ಬಿಟ್ಟುಕೊಡುವುದಿಲ್ಲ. ನೀವು ನಿಮ್ಮ ಗುರುತುಗಳನ್ನು ಹೆಮ್ಮೆಯಿಂದ ಧರಿಸಿ. ಮುಂದೊಂದು ದಿನ ನೀವು ಹೇಳಲು ಕಥೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇದು ಆರಂಭವಷ್ಟೇ”ಎಂದಿದ್ದಾರೆ.