ಇಂದಿನ ಆಧುನಿಕ ಯುಗದಲ್ಲಿ ತೂಕ ಇಳಿಸುವಿಕೆ ತುಂಬಾ ಕಷ್ಟದ ಕೆಲಸ. ಇನ್ನು ಹೀರೋಯಿನ್ ಗಳು ಸದಾ ಫಿಟ್ ಆಗಿ ಕಾಣಲು ಪ್ರಯತ್ನಿಸುತ್ತಲೇ ಇರುತ್ತಾರೆ. ಡಯಟ್ , ಪ್ರೊಟೀನ್ ಶೇಕ್ ಮುಂತಾದವನ್ನು ತಯಾರಿಸಿ ಕುಡಿಯುತ್ತಾರೆ.
ಚಂದನವನದ ಬೆಡಗಿ ಅದಿತಿ ಪ್ರಭುದೇವ ತೂಕ ಇಳಿಸಲು ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಕೆಲ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ಮೊದಲನೆಯದು ನಿಂಬೆ ಮತ್ತು ಜೇನುತುಪ್ಪ. ಬೆಚ್ಚಗಿನ ನೀರಿಗೆ ಒಂದು ಹನಿ ನಿಂಬೆರಸ ಒಂದು ಸ್ಪೂನ್ ಜೇನು ಹಾಕಿ ಕುಡಿಯುವುದರಿಂದ ತೂಕ ಇಳಿಸಲು ಸಹಕಾರಿ ಎನ್ನುತ್ತಾರೆ ಬೆಣ್ಣೆ ನಗರಿ ಬೆಡಗಿ.
4 ತುಂಡು ಸೇಬು, 4 ಸೌತೆಕಾಯಿ ತುಂಡು , ಟೊಮಾಟೋ, ಪುದೀನಾ ಶುಂಠಿ ಕ್ಯಾರೆಟ್ , ಬೀಟ್ರೂಟ್ ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಬೇಕು. ನಂತರ ಅದನ್ನು ಕುಡಿದರೆ ತೂಕ ಇಳಿಸಲು ನೆರವಾಗುವುದಲ್ಲದೇ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಅದಿತಿ.
ಬೆರ್ರಿಗಳು ಅಥವಾ ಕಿತ್ತಳೆ ಹಣ್ಣು, ಬಾಳೆಹಣ್ಣು , ಪ್ರೊಟೀನ್ ಪೌಡರ್ , ಸ್ವಲ್ಪ ನಿಂಬೆರಸ ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಬೆಳಗಿನ ಬ್ರೇಕ್ ಫಾಸ್ಟ್ ಬದಲಿಗೆ ಕುಡಿಯಬಹುದು. ಅರಿಶಿನ ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಇನ್ನೂ ಉತ್ತಮ ಎಂದು ಹೇಳುತ್ತಾರೆ ದಾವಣಗೆರೆ ಚೆಲುವೆ.
ಪಾಲಕ್ ಸೊಪ್ಪು , ಬಾಳೆಹಣ್ಣು, ಸೌತೆಕಾಯಿ ಸಿಪ್ಪೆ ಸಮೇತ ,8 ಬಾದಾಮಿ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ಇಳಿಕೆಗೆ ಸಹಕಾರಿ. ಇನ್ನು ಕ್ಯಾರೆಟ್ ತುರಿದು ಹಾಲು ಕುದಿಸುವಾಗ ಹಾಕಿ ಅದನ್ನು ಬೇಯಿಸಿ ಕುಡಿಯುವುದರಿಂದ ದೇಹಕ್ಕೆ ಉತ್ತಮ ಎನ್ನುವ ಟಿಪ್ಸ್ ಕೊಟ್ಟಿದ್ದಾರೆ ಅದಿತಿ ಪ್ರಭುದೇವ.