ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ದಲ್ಲಿ ನಟ ಯಶಸ್ ಸೂರ್ಯ ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಜೋರಾಗಿತ್ತು….ನಟಿ ರಚಿತಾ ರಾಮ್ ಅವರಿಗೆ ಚಿತ್ರತಂಡ ಆಹ್ವಾನ ಮಾಡಿದ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು…. ಆದರೆ ಸದ್ಯದ ಸುದ್ದಿ ಪ್ರಕಾರ ನಟಿ ರಚಿತಾ ರಾಮ್ ಗರಡಿ ಚಿತ್ರದಲ್ಲಿ ಅಭಿನಯ ಮಾಡುತ್ತಿಲ್ಲವಂತೆ.
ರಚಿತಾ ರಾಮ್ ಸ್ಥಾನಕ್ಕೆ ಪಂಚತಂತ್ರ ಸಿನಿಮಾ ಖ್ಯಾತಿಯ ಸೋನಾಲ್ ಮಾಂಟೇರಿಯೋ ಎಂಟ್ರಿಯಾಗಿದ್ದಾರೆ …ಈಗಾಗಲೇ ಪಂಚತಂತ್ರ ಸಿನಿಮಾದಲ್ಲಿ ಭಟ್ಟರ ಜತೆ ಕೆಲಸ ಮಾಡಿದ ಸೋನಾಲ್ ಈಗ ಗರಡಿ ಸಿನಿಮಾದಲ್ಲೂ ಅಭಿನಯ ಮಾಡಲಿದ್ದಾರಂತೆ… ಗರಡಿ ಸಿನಿಮಾವನ್ನ ಬಿ.ಸಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದು.. ಸಿನಿಮಾದ ಚಿತ್ರೀಕರಣ ಇದೇ ವಾರದಲ್ಲಿ ಶುರುವಾಗಲಿದೆ…. ಇನ್ನೂ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ… ಚಿತ್ರಕ್ಕೆ ವಿ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು ನಿರಂಜನ್ ಬಾಬು ಛಾಯಾಗ್ರಹಣ ಮಾಡಲಿದ್ದಾರೆ…. ಕೌರವ ವೆಂಕಟೇಶ್ ವಿನೋದ್ ಮತ್ತು ವಿಕ್ರಮ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ…
ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿದ್ದು ಸದ್ಯ ಭಟ್ಟರ ತಂಡ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದೆ….ಇನ್ನು ಬಿಗ್ ಬಜೆಟ್ ನ ಸಿನಿಮಾ ರಚಿತ ಕೈಬಿಟ್ಟಿದ್ದು ಯಾಕೆ ಅನ್ನುವ ಪ್ರಶ್ನೆಗೆ ಉತ್ತರ… ಸದ್ಯ ರಚಿತಾ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಂತೆ, ಗರಡಿ ಸಿನಿಮಾ ಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹೊರ ನಡೆದಿದ್ದಾರೆ….