ಕ್ರೇಜಿಸ್ಟಾರ್ ರವಿಚಂದ್ರನ್ ಸದ್ಯ ಯಾವುದೇ ಸಿನಿಮಾಗಳನ್ನ ಬಿಟ್ಟು ಕಿರುತೆರೆ ಕಡೆ ಗಮನ ಹರಿಸುತ್ತಿದ್ದಾರೆ…ಕೋವಿಡ್ ಮುನ್ನ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿಕೊಟ್ಟಿರುವ ರವಿಚಂದ್ರನ್ ಸದ್ಯ ರಿಯಾಲಿಟಿ ಶೋ ನತ್ತ ಮುಖ ಮಾಡಿದ್ದಾರೆ.. ಹೌದು ಇದೇ ಮೊದಲ ಬಾರಿಗೆ ರವಿಚಂದ್ರನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ …
ಜೀ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಜಡ್ಜ್ ಆಗಿ ಭಾಗಿಯಾಗಲಿದ್ದಾರೆ… ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ವಿಜಯ ರಾಘವೇಂದ್ರ, ಟಿ ಎನ್ ಸೀತಾರಾಂ, ಯೋಗರಾಜ್ ಭಟ್, ಲಕ್ಷ್ಮೀ ತೀರ್ಪುಗಾರರಾಗಿ ಭಾಗಿಯಾಗಿದ್ದರು… ಆದರೆ ಈಗ ವಿಜಯರಾಘವೇಂದ್ರ ಅವ್ರು ಬೇರೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಯೋಗರಾಜ್ ಭಟ್ ಹಾಗೂ ಟಿಎನ್ ಸಿತಾರಾಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ… ಹಾಗಾಗಿ ಅವರ ಸ್ಥಾನದಲ್ಲಿ ಇನ್ನು ಮುಂದೆ ರವಿಚಂದ್ರನ್ ಅವರನ್ನ ಕಾಣಬಹುದಾಗಿದೆ..
ಇನ್ನು ರವಿಮಾಮ ಕಿರುತೆರೆಗೆ ಮೊದಲ ಬಾರಿಗೆ ಎಂಟ್ರಿ ಕೊಡ್ತಾ ಇರೋದ್ರಿಂದ ಜೀ ವಾಹಿನಿಯವರು ವಿಭಿನ್ನ ರೀತಿಯಲ್ಲಿ ಅವರ ಎಂಟ್ರಿಯನ್ನು ಸೆಲೆಬ್ರೇಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ… ಈಗಾಗಲೇ ರವಿಚಂದ್ರನ್ ಅವ್ರನ್ನ ಕಿಡ್ನಾಪ್ ಮಾಡುವಂತಹ ಪ್ರೋಮೋವನ್ನ ರಿಲೀಸ್ ಮಾಡಿರುವ ಜೀ ಕನ್ನಡ ತಂಡ ಹೊಸ ಶೂಗಾಗಿ ಈ ರೀತಿಯ ಪ್ರೋಮೋಗಳನ್ನ ಶೂಟ್ ಮಾಡಿದ್ದಾರೆ …ಇಷ್ಟು ದಿನಗಳು ಬಿಗ್ ಸ್ಕ್ರೀನ್ ನಲ್ಲಿ ರವಿಚಂದ್ರನ್ ನೋಡಿ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳು ಇನ್ಮುಂದೆ ಸ್ಮಾಲ್ ಸ್ಕ್ರೀನ್ ನಲ್ಲೂ ನೋಡಿ ಖುಷಿ ಪಡಬಹುದಾಗಿದೆ