Karnataka Bhagya
Blogರಾಜಕೀಯ

ತಾಯಿಯ ಮಡಿಲು ಸ್ವರ್ಗ ಎಂದ ಸಲ್ಮಾನ್ ಖಾನ್

ಬಾಲಿವುಡ್ ನ ಸುಲ್ತಾನ್ ಎಂದೇ ಜನಪ್ರಿಯರಾಗಿರುವ ಸಲ್ಮಾನ್ ಖಾನ್ ತನ್ನ ತಾಯಿಯೊಂದಿಗೆ ಇರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ತಮ್ಮ ತಾಯಿ ಸಲ್ಮಾ ಖಾನ್ ಜೊತೆ ಮಧುರ ಕ್ಷಣದ ಫೋಟೋವೊಂದನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ತನ್ನ ತಾಯಿ ಮಡಿಲಿನಲ್ಲಿ ತಲೆಯನ್ನಿಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಸಲ್ಮಾನ್ ಖಾನ್ “ತಾಯಿಯ ಮಡಿಲು ಸ್ವರ್ಗ” ಎಂದು ಬರೆದುಕೊಂಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಅವರು ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 18 ಲಕ್ಷಕ್ಕೂ ಅಧಿಕ ಜನರು ಲೈಕ್ಸ್ ಬಂದಿದೆ. ಮಾತ್ರವಲ್ಲ ಅನೇಕರು ಈ ಫೋಟೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮ್ಮಾ ಮಗ ಜೋಡಿಯನ್ನು ಜನ ಇಷ್ಟ ಪಟ್ಟಿದ್ದು ಮಗ ಎಂದರೆ ಈ ರೀತಿ ಇರಬೇಕು ಎಂದು ಕಮೆಂಟ್ ಕೂಡಾ ಮಾಡುತ್ತಿದ್ದಾರೆ.

ಸಲೀಂ ಖಾನ್ ಹಾಗೂ ಸಲ್ಮಾ ಖಾನ್ ಪುತ್ರನಾಗಿರುವ ಸಲ್ಮಾನ್ ಖಾನ್ ಬಾಲಿವುಡ್ ನಟ ಬೇಡಿಕೆಯ ನಟರಲ್ಲಿ ಒಬ್ಬರು. ಆಯುಷ್ ಶರ್ಮಾ ಅವರ “ಅಂತಿಮ್” ಚಿತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಮೊನ್ನೆಯಷ್ಟೇ ರಿಲೀಸ್ ಆದ “ಮೈನ್ ಚಲಾ” ಎಂಬ ಹಾಡಿನಲ್ಲಿ ಅಭಿನಯಿಸಿದ್ದು ಇದನ್ನು ಜನ ಮೆಚ್ಚಿಕೊಂಡಿದ್ದರು.

Related posts

ಸರಿಗಮಪ ವೇದಿಕೆಯಲ್ಲಿ ಚಿರಂಜೀವಿ -ಕ್ರೇಜಿಸ್ಟಾರ್ ಸ್ನೇಹವನ್ನು ಮೆಲುಕು ಹಾಕಿದ ಸ್ಪರ್ಧಿಗಳು

Nikita Agrawal

ರಾಧೆಯಾಗಿ ಮೋಡಿ ಮಾಡಿದ ಚಂದನವನದ ಚೆಲುವೆ

Nikita Agrawal

ರಶ್ಮಿಕಾ ಮಂದಣ್ಣಾಗೆ ದ್ರೋಹ ಬಗೆದ ಮ್ಯಾನೇಜರ್, 80 ಲಕ್ಷ ಹಣದೊಂದಿಗೆ ಪರಾರಿ…!

kartik

Leave a Comment

Share via
Copy link
Powered by Social Snap