ಮೇಘಾ ಶೆಟ್ಟಿ… ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಅರೇ ಹೇಳದೇ ಕೇಳದೇ ಮೇಘಾ ಶೆಟ್ಟಿ ಹಸೆಮಣೆ ಏರುತ್ತಿದ್ದಾರಾ? ಯಾರಪ್ಪ ಹುಡುಗ ಎಂದು ಕನ್ ಫ್ಯೂಸ್ ಆಗಬೇಡಿ.ಯಾಕೆಂದರೆ ಮದುವೆಯೇನೂ ಆಗುತ್ತಿರುವುದು ನಿಜ. ಆದರೆ ಮದುವೆಯಾಗುತ್ತಿರುವವರು ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ.
ಅಕ್ಕನ ಮದುವೆಯ ಸಂಭ್ರಮದಲ್ಲಿ ಇರುವ ಮೇಘಾ ಶೆಟ್ಟಿ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹಂದಿ ಶಾಸ್ತ್ರದ ವಿಡಿಯೋ ಹಾಗೂ ಫೋಟೋಗಳನ್ನು ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ಸ್ವತಃ ಅನು ಸಿರಿಮನೆ ಪಾತ್ರಕ್ಕೆ ಮೇಕಪ್ ಮಾಡುವುದು ಅವರೇ ಎನ್ನುವುದು ವಿಶೇಷ. ವಿನೋದ್ ಜಿ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಸುಷ್ಮಾ. ಒಟ್ಟಿನಲ್ಲಿ ಈ ಸಂಭ್ರಮದ ಕ್ಷಣಕ್ಕೆ ಬಂಧುಮಿತ್ರರು, ಸ್ನೇಹಿತರು ಕೂಡಾ ಹಾಜರಾಗಿದ್ದು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.