ಟಾಲಿವುಡ್ ನ ಕೃಷ್ಣ ಸುಂದರಿ ಪೂಜಾ ಹೆಗ್ಡೆ ಸದ್ಯ ಸಖತ್ ಬ್ಯುಸಿಯಾಗಿರುವ ನಟಿ.. ತೆಲುಗು ಸಿನಿಮಾ ರಂಗದಲ್ಲೇ ನಂಬರ್ ಒನ್ ಪಟ್ಟದಲ್ಲಿ ಗಿಟ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ವ್ಯಾಲೆಂಟೈನ್ಸ್ ಡೇ ಸಖತ್ ಸ್ಪೆಷಲ್ ಆಗಿತ್ತು ..
ಈ ವರ್ಷದ ಪ್ರೇಮಿಗಳ ದಿನ ಪೂಜಾ ಹೆಗ್ಡೆ ಪಾಲಿಗೆ ಡಬಲ್ ಧಮಾಕ ಅಂತಾನೇ ಹೇಳಬಹುದು… ಹೌದು ಪೂಜಾ ಹೆಗ್ಡೆ ಅಭಿನಯದ ಸಿನಿಮಾದ ಟೀಸರ್ ಹಾಗೂ ಮತ್ತೊಂದು ಚಿತ್ರದ ಹಾಡು ಎರಡು ಕೂಡ ವ್ಯಾಲೆಂಟೈನ್ಸ್ ಡೇ ದಿನಕ್ಕೆ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದಿದೆ ..
ತೆಲುಗು ಸಿನಿಮಾರಂಗದಲ್ಲಿ ಬಿಡುಗಡೆಗೆ ಸಿದ್ಧವಾಗಿರುವಂತ ರಾಧೆ ಶ್ಯಾಮ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯ ಮಾಡಿದ್ದಾರೆ…ಪ್ರೇಮಿಗಳ ದಿನದ ವಿಶೇಷವಾಗಿ ರಾಧೆ ಹಾಗೂ ಶ್ಯಾಮ್ ನಡುವಿನ ಸುಂದರ ದೃಶ್ಯವನ್ನು ಚಿತ್ರತಂಡ ಬಿಡುಗಡೆ ಮಾಡಿದೆ ..
ಇನ್ನು ಕಾಲಿವುಡ್ ಅಂಗಳದಲ್ಲಿ ಬಹುನಿರೀಕ್ಷಿತ ಸಿನಿಮಾವಾಗಿರುವ ಬೀಸ್ಟ್ ಚಿತ್ರದ ಹಾಡನ್ನ ಕೂಡ ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ …ಬೀಸ್ಟ್ ಚಿತ್ರದಲ್ಲಿ ವಿಜಯ್ ಜೊತೆ ಪೂಜಾ ಹೆಗ್ಡೆ ತೆರೆಹಂಚಿಕೊಂಡಿದ್ದಾರೆ… ಈ ಹಾಡು ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ… ಒಟ್ಟಾರೆ ಈ ವ್ಯಾಲೆಂಟೈನ್ಸ್ ಡೇ ಕೆರಿಯರ್ ವಿಚಾರದಲ್ಲಿ ಪೂಜಾ ಹೆಗ್ಡೆಗೆ ಸಖತ್ ಸ್ಪೆಷಲ್ಲಾಗಿದೆ …