ಬಿಚ್ಚುಗತ್ತಿ ಸಿನಿಮಾ ಬಿಡುಗಡೆಯಾದ ನಂತರ ನಟ ರಾಜವರ್ಧನ್ ಯಾವುದೇ ಸಿನಿಮಾದ ಸುದ್ದಿಯಿಲ್ಲದೇ ಸೈಲಾಂಟ್ ಆಗಿದ್ರು… ಸತತ 2ವರ್ಷದ ನಂತರ ಮತ್ತೆ ರಾಜವರ್ಧನ್ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಟ್ಟಿದ್ದಾರೆ..
ಹೌದು ರಾಜವರ್ಧನ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಲಿದೆ… ಚಿತ್ರಕ್ಕೆ ಹಿರಣ್ಯ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು ಚಿತ್ರಕ್ಕೆ ಪ್ರವೀಣ್ ಆಯುಕ್ತ ಆಕ್ಷನ್ ಕಟ್ ಹೇಳುತ್ತಿದ್ದಾರೆ… ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದು ,ವಿಘ್ನೇಶ್ವರ ಹಾಗೂ ವಿಜಯ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ…
ಇನ್ನು ವಿಶೇಷ ಅಂದರೆ ಈ ಚಿತ್ರದ ಶೀರ್ಷಿಕೆ ಹಿರಣ್ಯ ಎಂಬುವುದು ನಟ ಧನಂಜಯ ಬಳಿ ಇತ್ತಂತೆ… ನಂತರ ರಾಜವರ್ಧನ್ ತಮ್ಮ ಕಥೆಗೆ ಈ ಶೀರ್ಷಿಕೆ ಸೂಕ್ತವಾಗುತ್ತದೆ ಎಂದು ತಿಳಿಸಿದ್ದಾರೆ ಆನಂತರ ಧನಂಜಯ ಗೆಳೆಯನಿಗಾಗಿ ಈ ಟೈಟಲ್ ಬಿಟ್ಟುಕೊಟ್ಟಿದ್ದಾರೆ… ಇಂದು ಮುಹೂರ್ತ ಮುಗಿಸಿರುವ ಸಿನಿಮಾತಂಡ ಇದೇ ತಿಂಗಳ 21ರಿಂದ ಚಿತ್ರೀಕರಣ ಆರಂಭ ಮಾಡಲಿದೆ
…..