ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮಗ ಮತ್ತು ಮಗಳು ಸದಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುತ್ತಾರೆ …ಮುದ್ದು ಮುದ್ದಾಗಿರೋ ಇವರಿಬ್ಬರನ್ನ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಇದೆ ಇಂಡಸ್ಟ್ರಿ ಕಲಾವಿದರೆಲ್ಲರೂ ಎತ್ತಿ ಮುದ್ದಾಡುತ್ತಾರೆ ..
ಇತ್ತೀಚೆಗಷ್ಟೆ ಐರಾ ಹಾಗೂ ಯಥರ್ವ್ ಫ್ಲೈಟ್ ನಲ್ಲಿ ಕೂತು ಆಟವಾಡುತ್ತಿರುವಂತಹ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದರು…ಈ ಫೋಟೋಗಳನ್ನ ನೋಡಿದ ಅಭಿಮಾನಿಗಳಲ್ಲಿ ಇವರಿಬ್ಬರೂ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಕುತೂಹಲವಿತು..

ಸದ್ಯ ಅಭಿಮಾನಿಗಳ ಕುತೂಹಲಕ್ಕೆ ನಟಿ ರಾಧಿಕಾ ಪಂಡಿತ್ ಅವರೇ ಉತ್ತರಿಸಿದ್ದಾರೆ… ಹೌದು ನಟಿ ರಾಧಿಕಾ ಪಂಡಿತ್ ಮುಂಬೈನಲ್ಲಿ ತಮ್ಮ ಸಹೋದರ ಸಂಬಂಧಿ ಅವರ ವಿವಾಹಕ್ಕಾಗಿ ಪ್ರಯಾಣ ಬೆಳೆಸಿದ್ದರು… ಆ ಸಮಯದಲ್ಲಿ ಪ್ರೈವೇಟ್ ಜೆಟ್ ನಲ್ಲಿ ಇಡೀ ಫ್ಯಾಮಿಲಿ ಪ್ರಯಾಣ ಮಾಡಿದ್ದು ಆ ಫೋಟೋಗಳನ್ನು ರಾಧಿಕಾ ಕೆಲವು ದಿನಗಳ ಹಿಂದೆ ಶೇರ್ ಮಾಡಿದ್ದರು… ಈಗ ಮದುವೆ ಸಂಭ್ರಮದ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಾವು ತಮ್ಮ ಚಿಕ್ಕಮ್ಮನ ಮಗ ಮದುವೆಯ ಸಂಭ್ರಮವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ..

ಇನ್ನು ಮದುವೆಯಲ್ಲಿ ರಾಧಿಕ ಹಳದಿ ಹಾಗೂ ತಿಳಿ ಹಸಿರಿನ ಲೆಹೆಂಗಾ ಧರಿಸಿ ಮಿಂಚಿದರೆ… ನಟ ಯಶ್ ಬ್ಲಾಕ್ ಹಾಗೂ ಕ್ರೀಮ್ ಕಾಂಬಿನೇಷನ್ ನ ಔಟ್ ಫಿಟ್ ನಲ್ಲಿ ಮಿಂಚಿದ್ದಾರೆ…
