ನಟಿ ಮೇಘನಾ ರಾಜ್ ಹಿರಿತೆರೆಗೆ ಮರಳಿದ್ದು, ಸದ್ಯ ಇರುವುದೆಲ್ಲವ ಬಿಟ್ಟು ಚಿತ್ರ ತಂಡದೊಂದಿಗೆ ಮತ್ತೊಮ್ಮೆ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಹೊಸ ಚಿತ್ರದ ಹೆಸರನ್ನು ಕೂಡಾ ಮೇಘನಾ ರಾಜ್ ಅನೌನ್ಸ್ ಕೂಡಾ ಮಾಡಿದ್ದು ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಾಂತರಾಜ್ ಕನ್ನಳ್ಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಮಗ ಹುಟ್ಟಿದ ನಂತರ ಮೇಘನಾ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.
ಇನ್ನು ಈ ಸಿನಿಮಾದಲ್ಲಿ ಮೇಘನಾ ವಿಭಿನ್ನ
ಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಹೌದು, ಮೇಘನಾ ಈ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರ ಮಾಡುತ್ತಿದ್ದಾರೆ.
“ನಾನು ಇಲ್ಲಿ ಮಾಧವಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮಾಧವಿ ಪಾತ್ರ ಒಂದು ಘಟನೆ ಏಕೆ , ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದನ್ನು ಬೇಧಿಸುವ ವ್ಯಕ್ತಿಯಾಗಿರುತ್ತಾರೆ. ಇದು ಚಿತ್ರದ ಪ್ರಮುಖ ಅಂಶವಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರಗಳಿಲ್ಲ. ಮೂರು ಪ್ರಮುಖ ಪಾತ್ರಗಳು ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ. ಕಟೆಂಟ್ ಇರುವಂತಹ ಸಿನಿಮಾವಾದ ಕಾರಣ ನಾನು ಇದನ್ನು ಒಪ್ಪಿಕೊಂಡೆ” ಎಂದು ಹೇಳುತ್ತಾರೆ ಮೇಘನಾ ರಾಜ್.
ಸದ್ಯ ಶಬ್ದ ಸಿನಿಮಾದ ಶೂಟಿಂಗ್ ಕುಂದಾಪುರದಲ್ಲಿ ನಡೆಯುತ್ತಿದ್ದು ಮೇಘನಾ ಅಲ್ಲದೇ ಅತುಲ್ ಕುಲಕರ್ಣಿ ನಟಿಸಿದ್ದಾರೆ. ನಿರ್ದೇಶಕ ಹಾಗೂ ನಟ ಎಸ್ ಮಹೇಂದರ್ ತುಂಬಾ ವರ್ಷಗಳ ಬಳಿಕ ಈ ಸಿನಿಮಾ ಮೂಲಕ ನಟನೆಗೆ ಮರಳಿದ್ದು ಅವರು ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.