ಬಹುಭಾಷಾ ತಾರೆ ಎಂದು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹರಿಪ್ರಿಯಾ ಅವರಿಗೆ ಪ್ರಾಣಿಗಳೆಂದರೆ ಅಪಾರ ಕಾಳಜಿ. ಕೆಲವು ತಿಂಗಳುಗಳಷ್ಟೇ ತಮ್ಮ ಪ್ರೀತಿಯ ನಾಯಿಯ ಅಗಲುವಿಕೆಯನ್ನು ತಿಳಿಸಿದ್ದ ಹರಿಪ್ರಿಯಾ ದುಃಖತಪ್ತರಾಗಿದ್ದರು. ಆದರೆ ಇದೀಗ ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಈಕೆ ಬರಮಾಡಿಕೊಂಡಿದ್ದು ಮನೆಯ ಹೊಸ ಸದಸ್ಯನನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ.
ನಮ್ಮ ಕುಟುಂಬಕ್ಕೆ ಹೊಸದಾಗಿ ಸೇರಿರುವ ಅತಿಥಿ. ಈ ಅತಿಥಿಯ ಹೆಸರು ಕ್ರಿಸ್ಟಲ್. ನೀವು ಇವನನ್ನು ಮೀಟ್ ಮಾಡಲೇಬೇಕು. ನೀಲಿ ಕಂಗಳ ಮೂಲಕ ಮನ ಸೆಳೆಯುವ ಈತನಿಗೆ ಕೇವಲ 3.5 ತಿಂಗಳು.”ಎಂದು ಹೊಸ ಅತಿಥಿಯ ಪರಿಚಯ ಮಾಡಿಕೊಟ್ಟಿದ್ದಾರೆ ಹರಿಪ್ರಿಯಾ.
“ಮುದ್ದಿನ ನಾಯಿ ಲಕ್ಕಿಯನ್ನು ಕಳೆದುಕೊಂಡಿದ್ದೇನೆ. ಲಕ್ಕಿ ಹೋದ ಎರಡು ತಿಂಗಳ ಬಳಿಕ ಈತ ಸರ್ಪ್ರೈಸ್ ಗಿಫ್ಟ್ ಆಗಿ ನಮ್ಮ ಮನೆಗೆ ಬಂದನು. ಇದೀಗ ನಾನು ನಿಮಗೆ ಮತ್ತೊಮ್ಮೆ ನನ್ನ ಲಕ್ಕಿಯನ್ನು ಭೇಟಿ ಮಾಡಿಸುತ್ತಿದ್ದೇನೆ. ಲಕ್ಕಿ ಹಾಗೂ ಕ್ರಿಸ್ಟಲ್ ಇವೆರಡು ಹುಟ್ಟಿದ್ದು ಒಂದೇ ದಿನ, ಅದು ಡಿಸೆಂಬರ್ 6. ಸದಾ ನಿಮ್ಮ ಆಶೀರ್ವಾದವನ್ನು ಕ್ರಿಸ್ಟಲ್ ಗೆ ನೀಡಿ” ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ಹರಿಪ್ರಿಯಾ ಅವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿ ಎಲ್ಲವೂ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕುವ ಪೋಸ್ಟ್ ಗಳಿಂದಲೇ ತಿಳಿಯುತ್ತದೆ. ಬಿಡುವಿನ ಸಮಯದಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವ ಆಕೆ ಅವುಗಳ ಜೊತೆಗಿನ ಫೋಟೋವನ್ನಾಗಲೀ, ವಿಡಿಯೋವನ್ನಾಗಲೀ ಅಪ್ ಲೋಡ್ ಮಾಡುವುದನ್ನು ಮರೆಯುವುದಿಲ್ಲ.