ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ತಲೆ ದಂಡ” ವು ಇದೇ ಎಪ್ರಿಲ್ ಒಂದರಂದು ರಿಲೀಸ್ ಆಗಲಿದೆ.
ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನೆಲೆಸಿ ಮರ ಹಾಗೂ ಪರಿಸರವನ್ನು ಕಾಪಾಡಲು ಹೋರಾಟ ಮಾಡುವ ಪಾತ್ರವಾಗಿದ್ದು ಮತ್ತೊಮ್ಮೆ ನಟನೆಯ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ವಿಜಯ್ ತಯಾರಾಗಿದ್ದಾರೆ.
ಮಲೆಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ಸಂಚಾರಿ ವಿಜಯ್ ಜೊತೆಗಿನ ಭೇಟಿಯ ಸುಂದರ ಘಳಿಗೆಯನ್ನು ನೆನಪಿಸಿಕೊಂಡಿದ್ದು, ತಲೆದಂಡ ಸಿನಿಮಾ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
ತಲೆದಂಡ ಚಿತ್ರದ ಪೋಸ್ಟರ್ ನ್ನು ತನ್ನ ಪೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಮಮ್ಮುಟ್ಟಿ “ನಾನು ಇಲ್ಲಿ ಕುಳಿತು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ಅವರಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ನಾವು ಹೈದರಾಬಾದ್ ನಲ್ಲಿ ಅವಾರ್ಡ್ ಫಂಕ್ಷನ್ ನಲ್ಲಿ ಭೇಟಿ ಆಗಿದ್ದೆವು. ಅವರು ನನ್ನ ಅಭಿಮಾನಿ ಎಂದು ಹೇಳಿದಾಗ ನಾನು ನಿಜವಾಗಿಯೂ ವಿನಮ್ರನಾಗಿದ್ದೆ. ಅವರ ಮುಂದಿನ ಚಿತ್ರವನ್ನು ನಾನು ನೋಡಬೇಕೆಂದು ಬಯಸಿದ್ದರು. ನನ್ನ ಆಲೋಚನೆಗಳನ್ನು ಕೇಳಲು ಬಯಸಿದ್ದರು. ಅದು ಅವರ ಕೊನೆ ಎಂದು ಯಾರಿಗೆ ತಿಳಿದಿತ್ತು. ನಾವು ಚಲನಚಿತ್ರವನ್ನು ಹಾಗೂ ಅವರ ಪರಿಶ್ರಮ ಹಾಗೂ ಪ್ರತಿಭೆಯನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ಅವರು ತಿಳಿಯಲು ಬಯಸುತ್ತಾರೆ ಎಂಬುದು ನನಗೆ ಖಾತ್ರಿಯಾಗಿದೆ” ಎಂದಿದ್ದಾರೆ.