ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರು ಒಬ್ಬ ಪ್ರತಿಭಾವಂತ ನಟಿ ಎಂಬ ವಿಚಾರ ಸಿನಿ ಪ್ರಿಯರಿಗೆ ತಿಳಿದೇ ಇದೆ. ಇನ್ನು ನಟನೆಯ ಹೊರತಾಗಿ ದೀಪಿಕಾ ಪಡುಕೋಣೆ ತನ್ನ ತಂದೆಯಂತೆ ಬ್ಯಾಡ್ಮಿಂಟನ್ ಆಟಗಾರ್ತಿ ಕೂಡಾ ಹೌದು. ಆದರೆ ದೀಪಿಕಾ ಅವರ ಬಗೆಗಿನ ಇನ್ನೊಂದು ವಿಚಾರ ಹಲವರಿಗೆ ತಿಳಿದಿಲ್ಲ. ಅದೇನಂತಿರಾ? ಅವರೊಬ್ಬ ಕವಯಿತ್ರಿ ಎಂದು ತಿಳಿದಿದೆಯೇ? ಹೌದು 12ನೇ ವಯಸ್ಸಿನಲ್ಲೇ ಕವಿತೆ ಬರೆದಿದ್ದರು.
ದೀಪಿಕಾ ಪಡುಕೋಣೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ “ಐ ಆಮ್ “ಎಂಬ ಶೀರ್ಷಿಕೆಯಡಿ ಪದ್ಯ ಬರೆದಿದ್ದರು. ದೀಪಿಕಾ ಅವರು ಉತ್ತಮ ಪ್ರಯತ್ನ ಮಾಡಿದ್ದು ಈ ಕವನ ಅವರ ಮೊದಲ ಹಾಗೂ ಕೊನೆಯ ಕವನವಾಗಿದೆ. ಭಾನುವಾರ ಈ ಕವನವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಕವಿತೆ ಬರೆಯುವಲ್ಲಿ ಇದು ನನ್ನ ಮೊದಲ ಹಾಗೂ ಕೊನೆಯ ಪ್ರಯತ್ನ. ಏಳನೇ ತರಗತಿಯಲ್ಲಿ ಬರೆದ ಕವಿತೆ. ನನಗೆ ಆಗ ಹನ್ನೆರಡನೇ ವಯಸ್ಸು. ಕವನದ ಶೀರ್ಷಿಕೆ “ಐ ಆಮ್” ಎಂದಿದ್ದಾರೆ.
ದೀಪಿಕಾ ಅವರ ಕವನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ದೀಪಿಕಾ ನಟನೆಯ ಗೆಹೆರಾಯಿಯಾನ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಶಾರುಕ್ ಖಾನ್ ಜೊತೆ ಪಠಾಣ್, ಪ್ರಭಾಸ್ ಜೊತೆಗೆ ಪ್ರಾಜೆಕ್ಟ್ ಕೆ , ಹೃತಿಕ್ ರೋಷನ್ ಜೊತೆ ಫೈಟರ್ ಚಿತ್ರಗಳಲ್ಲಿ ನಟಿಸುತ್ತಿರುವ ದೀಪಿಕಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.