ನಟಿ ದೀಪಿಕಾ ಪಡುಕೋಣೆ ಈ ಬಾರಿ ಕೇನ್ಸ್ ಚಲನಚಿತ್ರೋತ್ಸವಕ್ಕೆ ಈ ಬಾರಿ ತೀರ್ಪುಗಾರರಾಗಿ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಫೆಸ್ಟಿವಲ್ ಡಿ ಕೇನ್ಸ್ ನ ಅಧಿಕೃತ ಟ್ವಿಟ್ಟರ್ ಖಾತೆ ಈ ಸುದ್ದಿಯನ್ನು ಹಂಚಿಕೊಂಡಿದೆ. ಎಂಟು ತೀರ್ಪುಗಾರರ ಸದಸ್ಯರೊಂದಿಗೆ 75ನೇ ಫೆಸ್ಟಿವಲ್ ಡಿ ಕೇನ್ಸ್ ನ ತೀರ್ಪುಗಾರರ ಅಧ್ಯಕ್ಷರಾಗಿ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರನ್ನು ಘೋಷಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರಲ್ಲದೇ ರೆಬೆಕಾ ಹಾಲ್, ಅಸ್ಗರ್ ಫರ್ಹಾದಿ, ಲಾಡ್ಜ್ ಲೈ , ಜೆಫ್ ನಿಕೋಲ್ಸ್, ಜೋಕಿಮ್ ಟ್ರೈಯರ್ ,ನೂಮಿ ರಾಪೇಸ್, ಜಾಸ್ಮಿನ್ ಟ್ರಿಂಕಾ ತೀರ್ಪುಗಾರರಾಗಿದ್ದಾರೆ. ಈ ಉತ್ಸವ ಮೇ 17ರಿಂದ 26ರವರೆಗೆ ಫ್ರೆಂಚ್ ರಿವೇರಾದಲ್ಲಿ ನಡೆಯಲಿದೆ.
ಈ ಸುದ್ದಿ ಕೇಳಿ ದೀಪಿಕಾ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇದುವರೆಗೂ ಅವರು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಧರಿಸಿದ ಬಟ್ಟೆಗಳು ಹೀಗಿವೆ. ದೀಪಿಕಾ ಪಡುಕೋಣೆ ಅವರ ಮರೆಯಲಾಗದ ಲುಕ್ ಗಳಲ್ಲಿ ಗಿಯಾಂಬಾಟಿಸ್ಟಾ ವಲ್ಲಿ ಗೌನ್ ಆಗಿರಬೇಕು. ಇದು ಹಸಿರು ಬಣ್ಣದ ಉಡುಪು ಒಟಿಟಿ ರಫೆಲ್ಸ್ ,ಹೈಲೋ ಹೆಮ್ ,ಬಿಲ್ಲಿನಾಕಾರದ ನೆಕ್ ಲೈನ್ ಒಳಗೊಂಡಿದೆ. ಕೂದಲಿಗೆ ಗುಲಾಬಿ ಚಿನ್ನದ ಹೂವಿನ ಹೆಡ್ ವ್ರಾಪ್ ಧರಿಸಿದ್ದರು.
2018ರಲ್ಲಿ ಜುಹೈರ್ ಮುರಾದ್ ಸೃಷ್ಟಿಯನ್ನು ಧರಿಸಿ ಕೇನ್ಸ್ ಕಾರ್ಪೆಟ್ ಮೇಲೆ ನಡೆದಿದ್ದರು.2019ರಲ್ಲಿ ಪೀಟರ್ ಡುಂಡಾಸ್ ರಚಿಸಿದ ಡ್ರೆಸ್ ಧರಿಸಿ ಮಿಂಚಿದ್ದರು.