Karnataka Bhagya

ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಕಾಫಿ ನಾಡಿನ ಕುವರಿ ಆರೋಹಿ ನೈನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ಅಭಿನಯಿಸುತ್ತಿದ್ದ ಚಿಕ್ಕಮಗಳೂರಿನ ಚೆಲುವೆ ಇದೀಗ ಖಡಕ್ ವಿಲನ್! ತಾಯಿಯಂಥ ಮನಸ್ಸಿನ ಅತ್ತಿಗೆಯೆಲ್ಲಿ , ಖಡಕ್ ವಿಲನ್ ಎಲ್ಲಿ? ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಖಳನಾಯಕಿ ಸಾನಿಯಾ ಆಗಿ ಮೋಡಿ ಮಾಡುತ್ತಿರುವ ಆರೋಹಿ ನೈನಾ ಗೆದ್ದಿದ್ದಾರೆ.

ಹೌದು, ಕನ್ನಡತಿ ಧಾರಾವಾಹಿಯಲ್ಲಿ ನಟಿ ರಮೋಲಾ ಅವರು ಸಾನಿಯಾ ಆಗಿ ಅಭಿನಯಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ಅವರು ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗಕ್ಕೆ ಬಂದವರೇ ಚಿಕ್ಕಮಗಳೂರಿನ ಚೆಲುವೆ ಆರೋಹಿ ನೈನಾ‌.

ಅತ್ತಿಗೆ ಪಾತ್ರದ ಮೂಲಕ ವೀಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದ್ದ ಆರೋಹಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂದಾಗ ವೀಕ್ಷಕರು ಕೂಡಾ ಒಂದು ಕ್ಷಣ ಅವಕ್ಕಾಗಿದ್ದರು. ಆರೋಹಿಗೆ ಇದು ಸಾಧ್ಯನಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದರೆ ಇದೀಗ ಅವರು ಆ ಪ್ರಶ್ನೆಗೆ ಸಾಧ್ಯ ಎಂಬ ಉತ್ತರ ನೀಡಿದ್ದಾರೆ.

“ಸಾನಿಯಾ ಪಾತ್ರದ ಬಗ್ಗೆ ಹೇಳಬೇಕು ಅಂಥ ಇದ್ರೆ ಆರಂಭದಲಿ ನನಗೆ ತುಂಬಾ ಕಷ್ಟ ಆನ್ನಿಸ್ತಿತ್ತು. ಯಾಕೆಂದರೆ ಬೇರೆಯವರು ಮಾಡಿರುವಂತಹ ಪಾತ್ರ. ಅದಕ್ಕೆ ಜೀವ ತುಂಬುವುದು ಸುಲಭದ ಮಾತಲ್ಲ. ನಿಜಕ್ಕೂ ಸವಾಲಿನ ಕೆಲಸ. ಆರಂಭದಲ್ಲಿ ಪಾತ್ರ ಒಪ್ಪಿಕೊಂಡಾಗ ನನ್ನಿಂದ ಸಾಧ್ಯನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಸ್ಕ್ರೀನ್ ಮೇಲೆ ಬರುವ ತನಕವೂ ಭಯವಿತ್ತು. ಒಂದು ಸಾರಿ ಸ್ಕ್ರೀನ್ ಮೇಲೆ ಕಾನ್ಫಿಡೆನ್ಸ್ ಬಂತು” ಎಂದು ಹೇಳುತ್ತಾರೆ ಆರೋಹಿ ನೈನಾ.

“ಸಾನಿಯಾ ಪಾತ್ರಧಾರಿಯಾಗಿ ನಾನು ಕಾಣಿಸಿಕೊಂಡಾಗ ನೆಗೆಟಿವ್ ಕಾಮೆಂಟ್ ಗಳು ಕೂಡಾ ಬಂದಿತ್ತು. ವೀಕ್ಷಕರಿಗೂ ನನ್ನನ್ನು ಸ್ವೀಕರಿಸಲು ಸಮಯ ಬೇಕಾಗಿತ್ತು. ಇದೀಗ ನಾನು ಎಲ್ಲಿ ಹೋದರೂ ಸಾನಿಯಾ ಆಗಿ ಗುರುತಿಸಿಕೊಳ್ಳುತ್ತಿದ್ದೇನೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಆರೋಹಿ.

ಇವಳು ಸುಜಾತಾ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಆರೋಹಿ ನೈನಾ ಗೆ ಹೂಮಳೆಯ ಶೋಭಾ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಸಾನಿಯಾ ಆಗಿ ನಟಿಸುವ ಮೂಲಕ ಖಳನಾಯಕಿಯಾಗಿ ಭಡ್ತಿ ಪಡೆದಿರುವ ಆರೋಹಿ ನೈನಾ ಬೆಳದಿಂಗಳು ರಾತ್ರಿಲಿ ಎನ್ನುವ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap