ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ಕಾಳಿ ಯ ಪೋಸ್ಟರ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಅಭಿಷೇಕ್ ಅಂಬರೀಶ್ ಅವರ ರಗಡ್ ಲುಕ್. ಸಿನಿಮಾದ ಟೈಟಲ್ ಕೇಳಿಯೇ ಆಕರ್ಷಿತರಾದ ಸಿನಿ ಪ್ರಿಯರು ಇದೀಗ ಪೋಸ್ಟರ್ ನೋಡಿ ಪೂರ್ತಿ ಫಿದಾ ಆಗಿದ್ದಾರೆ.


ಅಭಿಷೇಕ್ ಅಂಬರೀಶ್ ಅವರ ನಟನೆಯ ಮೂರನೇ ಸಿನಿಮಾವಾಗಿದ್ದು ಇದರಲ್ಲಿ ಹಳ್ಳಿ ಹುಡುಗನಾಗಿ ನಿಮ್ಮನ್ನು ರಂಜಿಸಲು ಬರಲಿದ್ದಾರೆ. ಸಿನಿಮಾದಲ್ಲಿ ಕಾಲೇಜು ಹುಡುಗನಾಗಿರುವ ಇವರು ಪೋಸ್ಟರ್ ನಲ್ಲಿ ಲುಂಗಿ ಉಟ್ಟು ಸಿನಿಪ್ರಿಯರ ಮನ ಸೆಳೆದಿದ್ದಾರೆ. ಜೊತೆಗೆ 90 ರ ದಶಕದಲ್ಲಿ ಸದ್ದು ಮಾಡುತ್ತಿದ್ದ ಯೆಝ್ಡಿ ಬೈಕ್ ಅನ್ನು ಅಭಿಷೇಕ್ ಅವರು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಒಟ್ಟಿನಲ್ಲಿ ಅವರ ರಗಡ್ ಅವತಾರ ನೋಡಿ ಸಿನಿಪ್ರಿಯರು ವಾವ್ ಎಂದಿದ್ದಾರೆ.


ಇನ್ನು ಕಾಳಿ ಸಿನಿಮಾದ ಈ ಹೊಸ ಪೋಸ್ಟರ್ ಸಕತ್ ವೈರಲ್ ಆಗುತ್ತಿದೆ. ಇದರ ಕುರಿತು ಸಂತಸ ವ್ಯಕ್ತಪಡಿಸುತ್ತಿರುವ ನಿರ್ದೇಶಕ ಕೃಷ್ಣ” ಈ ಪೋಸ್ಟರ್ ಗೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ನಟಿಸಲಿದ್ದಾರೆ. ಕಾಲೇಜು ಮೆಟ್ಟಿಲೇರುವ ಹುಡುಗರಲ್ಲಿ ಕೋಪ ಇರುವುದು ಮಾಮೂಲಿ. ಅದೇ ಲುಕ್ ನಲ್ಲಿ ಇವರು ಸಿನಿಮಾ ಪೂರ್ತಿ ಕಾಣಿಸಿಕೊಳ್ಳಲಿದ್ದಾರೆ” ಎನ್ನುತ್ತಾರೆ.


ಇದರ ಜೊತೆಗೆ ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಅವರು ಬೇರೆ ಬೇರೆ ರೀತಿಯ ಲುಕ್ ಗಳ ಮೂಲಕವೂ ಮೋಡಿ ಮಾಡಲಿದ್ದಾರೆ. ಅದಕ್ಕಾಗಿ ಅವರು ತೂಕ ಇಳಿಸಿಕೊಳ್ಳುತ್ತಿದ್ದಾರೆ. ತೂಕ ಇಳಿಸಿದ ಮೇಲೆ ಮತ್ತೊಮ್ಮೆ ಫೋಟೋಶೂಟ್ ಮಾಡಿಸಲಿದ್ದೇವೆ” ಎಂದು ಹೇಳುತ್ತಾರೆ ಕೃಷ್ಣ.

