ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಧಾರಾವಾಹಿ ಕೀರ್ತಿ ಕುಮಾರ ಹಾಡುಗಾರದ ಮೂಲಕ ಕಿರುತೆರೆಗೆ ಪುನರಾಗಮನ ಮಾಡುವ ಮೊದಲೇ, ಕನ್ನಡ ನಟ ವಿನಯ್ ಗೌಡ ಅವರು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಮುಂಬರುವ ರಿಯಾಲಿಟಿ ಶೋ ಇಸ್ಮಾರ್ಟ್ ಜೋಡಿಯಲ್ಲಿ ನಟ ಮತ್ತೊಮ್ಮೆ ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಇಸ್ಮಾರ್ಟ್ ಜೋಡಿಯನ್ನು ಪ್ರಸ್ತುತಪಡಿಸಲಿರುವ ಸುವರ್ಣ ವಾಹಿನಿಯು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನ ಮೂಲಕ ಇದನ್ನು ಖಚಿತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ದಂಪತಿಗೆ ಶುಭಾಶಯಗಳ ಪೂರವೇ ಹರಿದು ಬಂದಿದೆ. ತಮ್ಮ ಪ್ರೀತಿಯ ನಿಜ ಜೀವನದ ಜೋಡಿಯನ್ನು ನೋಡಲು ಅಭಿಮಾನಿಗಳೂ ಉತ್ಸುಕರಾಗಿದ್ದಾರೆ.
ಅಂದಹಾಗೆ ಈ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ವಿಜಯಶಾಲಿಗಳೂ ಆಗಿದ್ದರು. ಟಾಸ್ಕ್ ಸಮಯದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಎಲ್ಲೆಡೆ ಮನೆಮಾತಾಗಿತ್ತು. ವೈಯಕ್ತಿಕ ಜೀವನದಲ್ಲಿ ವಿನಯ್ ಗೌಡ ಮತ್ತು ಅಕ್ಷತಾ ರಿಷಿ ಎಂಬ ಹುಡುಗನ ಹೆತ್ತವರೂ ಹೌದು.
ಹೊಸ ಜೋಡಿ ಆಧಾರಿತ ರಿಯಾಲಿಟಿ ಶೋ ಇದೇ ಶನಿವಾರದಿಂದ ಶುರುವಾಗಿದ್ದು ಹಲವು ವಿವಿಧತೆಯಿಂದ ಕೂಡಿರಲಿದೆ. ರಿಯಾಲಿಟಿ ಶೋ ಗಾಗಿ ಕನ್ನಡ ಮನರಂಜನಾ ಉದ್ಯಮದ ಹಲವು ಸೆಲೆಬ್ರಿಟಿಗಳನ್ನು ಸಂಪರ್ಕಿಸಲಾಗಿದೆ. ಅಂದ ಹಾಗೆ ರಿಯಾಲಿಟಿ ಶೋನಲ್ಲಿ ನಟ ಗಣೇಶ್ ನಿರೂಪಕನಾಗಿರಲಿದ್ದಾರೆ.
ಇದರಿಂದ ಕನ್ನಡ ಚಿತ್ರರಂಗದ ಎಲ್ಲರ ನೆಚ್ಚಿನ ಗೋಲ್ಡನ್ ಸ್ಟಾರ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.