ದಿಯಾ ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲಿ ಬರುವ ದಿಯಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಖುಷಿ ರವಿಗೆ ಆನಂತರ ಸಾಲು, ಸಾಲು ಆಫರ್ ಗಳು ಬರಲಾರಂಬಿಸಿದವು. ದಿಯಾ ಸಿನಿಮಾದಿಂದ ಖ್ಯಾತಿ ಪಡೆದ ಖುಷಿ ರವಿ ಈಗ ಕಿರು ಚಿತ್ರದಲ್ಲೂ ನಟಿಸಿದ್ದಾರೆ. ಎಂ.ಕೆ ಮಠ ನಟನೆಯ ‘ಎವೆರಿಥಿಂಗ್ ಈಸ್ ಪಾಸಿಬಲ್ ‘ ಎನ್ನುವ ಕಿರುಚಿತ್ರವನ್ನು ಮಾಡಿದ್ದಾರೆ.
ರಂಗಭೂಮಿ ಕಲಾವಿದರು ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಜೀವನದಿ ಸೀರಿಯಲ್ ನಟ ಇಕ್ಷ್ವಾಕು ರಾಮ್ ಸಾರಥ್ಯದಲ್ಲಿ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ ರಹಸ್ತ ಎಂಬ ಕಿರುಚಿತ್ರ ಮಾಡಿದ್ದ ಇಕ್ಷ್ವಾಕು ರಾಮ್ ಈಗ ‘ಎವೆರಿಥಿಂಗ್ ಈಸ್ ಪಾಸಿಬಲ್’ ಎಂಬ ಕ್ಯಾಚಿ ಟೈಟಲ್ ನಡಿ ಸೈನ್ಸ್ ಫಿಕ್ಷನ್ ಕಿರುಚಿತ್ರವೊಂದನ್ನು ಮಾಡಿದ್ದಾರೆ.
ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಎಂಕೆ ಮಠ ನಟನೆಯ ‘ಎವೆರಿಥಿಂಗ್ ಈಸ್ ಪಾಸಿಬಲ್’ ಒಂದು ಸೈನ್ಸ್ ಫಿಕ್ಷನ್ ಕಿರುಚಿತ್ರ. ಈ ರೀತಿಯ ಪ್ರಯೋಗ ಹೊಸದಿನಿಸುವಂತಿರುವ ಇದರಲ್ಲಿ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅಂದ ಹಾಗೆ ಈ ಕಿರುಚಿತ್ರದ ಲಾಂಚಿಂಗ್ ಕಾರ್ಯಕ್ರಮ ನೆರವೇರಿದೆ. ಲಾಂಚಿಂಗ್ನಲ್ಲಿ ಮಾತನಾಡಿದ ನಾಯಕಿ ಖುಷಿ ರವಿ ”ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾವಿದು. ಸೆಕೆಂಡ್ ಲಾಕ್ ಡೌನ್ ಟೈಮ್‌ನಲ್ಲಿ ಬಂದು ನಿರ್ದೇಶಕರು ಕಥೆ ಹೇಳಿದರು. ಇದೊಂದು ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದು. ಇವತ್ತಿನಿಂದ ನಮ್ಮ ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋದಲ್ಲಿ ಶಾರ್ಟ್ ಮೂವೀ ಸ್ಟ್ರೀಮ್ ಆಗ್ತಿದೆ. ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ” ಎಂದರು.
ಪಿಎಂಕೆ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಈ ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್ ಹಾಗೂ ಯಶ್ವಿಕ್ ನಿರ್ಮಾಣ ಮಾಡಿದ್ದಾರೆ. ಎರಿಕ್ ವಿಜೆ ಛಾಯಾಗ್ರಾಹಣ ಹಾಗೂ ಸಂಕಲನ ಕಿರು ಚಿತ್ರಕ್ಕಿದೆ. ಸ್ವಾಮಿನಾಥನ್ ಆರ್ ಕೆ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಕ್ಕಿದ್ದು ನಮ್ಮ ಫ್ಲಿಕ್ಸ್, ಅಮೇಜಾನ್, ಒಟಿಟಿಯಲ್ಲಿ ಈ ಕಿರುಚಿತ್ರ ರಿಲೀಸ್ ಆಗಿದೆ.