ಭಾರತ ಚಿತ್ರರಂಗದ ಸಿನಿಮಾಗಳಿಗೆ ನಮ್ಮ ದೇಶದ ಮಟ್ಟದಲ್ಲಿ ದಕ್ಕುವಂತಹ ಅತೀ ಶ್ರೇಷ್ಠ ಪ್ರಶಸ್ತಿಯೆಂದರೆ ಅದು ‘ರಾಷ್ಟ್ರ ಪ್ರಶಸ್ತಿ’. ಸದ್ಯ 68ನೇ ರಾಷ್ಟ್ರಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದಿದ್ದು, ಕನ್ನಡದ ಎರಡು ಸಿನಿಮಾಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಸೂರ್ಯ ಅವರ ನಟನೆಯ ತಮಿಳಿನ ಪ್ರಖ್ಯಾತ ಸಿನಿಮಾ ‘ಸೂರರೈ ಪೋಟ್ರು’ ಈ ಬಾರಿ ಅತೀ ಹೆಚ್ಚು ಅವಾರ್ಡ್ ಗಳನ್ನು ತಮ್ಮದಾಗಿಸಿಕೊಂಡಿದೆ.
ಸುಮಾರು ಮೂವತ್ತು ಭಾಷೆಗಳಿಂದ ಒಟ್ಟು, 305 ಸಿನಿಮಾಗಳನ್ನು ಪ್ರಶಸ್ತಿಯ ಪೈಪೋಟಿಗೆ ಪರಿಗಣಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ಪರಿಸರದ ಬಗೆಗಿನ ಚಿತ್ರ ಎಂದು ಸಂಚಾರಿ ವಿಜಯ್ ಅವರು ನಟಿಸಿರುವ ‘ತಲೆದಂಡ’ ಸಿನಿಮಾಗೆ ಪ್ರಶಸ್ತಿ ಘೋಷಿಸಲಾಗಿದೆ. ಅಲ್ಲದೇ ಕನ್ನಡದ ಅತ್ಯುತ್ತಮ ಚಿತ್ರ ಹಾಗು ಅತ್ಯುತ್ತಮ ಆತ್ಮಕತೆ ಎಂದು ‘ಡೊಳ್ಳು’ ಸಿನಿಮಾವನ್ನು ಪುರಸ್ಕರಿಸಿದ್ದಾರೆ. ಇನ್ನು 68ನೇ ಸಾಲಿನ ರಾಷ್ಟ್ರ ಪ್ರಶಸ್ತಿಗಳಲ್ಲಿ, ‘ಅತ್ಯುತ್ತಮ ನಟ’ ಎಂಬ ಬಿರುದನ್ನು ಇಬ್ಬರು ಹಚ್ಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾಗಾಗಿ ಸೂರ್ಯ ಹಾಗು ‘ತನ್ಹಾಜಿ’ ಸಿನಿಮಾಗಾಗಿ ಅಜಯ್ ದೇವಗನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇನ್ನು ಅತ್ತ್ಯುತ್ತಮ ನಿರ್ದೇಶಕರಾಗಿ ‘ಅಯ್ಯಪ್ಪನುಮ್ ಕೊಶಿಯುಮ್’ ಚಿತ್ರದ ಸಚ್ಚಿದಾನಂದ ಕೆ ಆರ್ ಅವರನ್ನು ಆರಿಸಲಾಯಿತು. ಇದಲ್ಲದೆ ಪ್ರಶಸ್ತಿಗೆ ಘೋಷಿತವಾದವರ ಪಟ್ಟಿ ಈ ಕೆಳಗಿನಂತಿದೆ:
- ಅತ್ಯುತ್ತಮ ಚಲನ ಚಿತ್ರ: ಸೂರರೈ ಪೋಟ್ರು (ತಮಿಳು)
- ಅತ್ಯುತ್ತಮ ಮನರಂಜನಾ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್ (ಹಿಂದಿ)
3.ಅತ್ಯುತ್ತಮ ನಟ: ಸೂರ್ಯ( ಸೂರರೈ ಪೋಟ್ರು) (ತಮಿಳು), ಅಜಯ್ ದೇವಗನ್(ತಾನಾಜಿ: ದಿ ಅನ್‌ಸಂಗ್ ವಾರಿಯರ್) (ಹಿಂದಿ) - ಅತ್ಯುತ್ತಮ ನಟಿ: ಅಪರ್ಣ ಬಾಲಮುರಳಿ ( ಸೂರರೈ ಪೋಟ್ರು) (ತಮಿಳು)
- ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು (ತಮಿಳು)
- ಅತ್ಯುತ್ತಮ ಪರಿಸರ ಸಂರಕ್ಷಣಾ ಸಿನಿಮಾ: ತಲೆದಂಡ (ಕನ್ನಡ)
- ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು (ಕನ್ನಡ)
8.ಅತ್ಯುತ್ತಮ ಆತ್ಮಚರಿತ್ರೆ: ಡೊಳ್ಳು (ಕನ್ನಡ) - ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನುಂ ಕೋಶಿಯುಂ) (ಮಲಯಾಳಂ)
- ಅತ್ಯುತ್ತಮ ಡೈಲಾಗ್: ಮಂಡೇಲಾ(ತಮಿಳು)