‘ನ್ಯಾಷನಲ್ ಕ್ರಶ್’ ಎಂದೇ ಎಲ್ಲೆಡೆ ಪ್ರಸಿದ್ದರಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಪಾನ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಕನ್ನಡದಿಂದ ಆರಂಭಿಸಿ, ತೆಲುಗು, ತಮಿಳು ಈಗ ಹಿಂದಿಯಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಅಭಿನಯda ಮೊದಲ ಬಾಲಿವುಡ್ ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.
ಅದೇ ‘ಗುಡ್ ಬೈ’ ಸಿನಿಮಾ.
ರಕ್ಷಿತ್ ಶೆಟ್ಟಿಯವರ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಆರಂಭವಾದ ರಶ್ಮಿಕಾ ಅವರ ಸಿನಿಪಯಣ, ಸದ್ಯ ಬಾಲಿವುಡ್ ನಲ್ಲಿ ಓಡುತ್ತಿದೆ. ಪ್ರತೀ ಭಾಷೆಯ ಚಿತ್ರರಂಗಗಳಲ್ಲೂ ಅಪಾರ ಅಭಿಮಾನಿ ಹೊಂದಿರುವ ಇವರು, ಬಾಲಿವುಡ್ ನ ಮೊದಲ ಸಿನಿಮಾದಲ್ಲೇ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸಿದ್ದಾರೆ. ವಿಕಾಸ್ ಬೊಲ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ‘ಬಿಗ್ ಬಿ’ ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತ, ಸಾಹಿಲ್ ಮೆಹತಾ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇದರ ತಾರಾಗಣದಿಂದಲೇ ಎಲ್ಲೆಡೆ ಸುದ್ದಿಯಲ್ಲಿರುವ ಈ ಸಿನಿಮಾ ಇದೇ ಅಕ್ಟೋಬರ್ 7ರಂದು ಭಾರತದಾದ್ಯಂತ ತೆರೆಕಾಣುತ್ತಿದೆ. ಸದ್ಯ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಹಂಚಿಕೊಂಡಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.