Karnataka Bhagya

ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಶಕ್ತಿ ಪ್ರಸಾದ್‌ ಪತ್ನಿ ಲಕ್ಷ್ಮಿ ದೇವಿ ಅವರು ವಯೋಸಹಜ ಕಾಯಿಲೆಯಿಂದ 22 ದಿನಗಳ ಕಾಲ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣ ನಿನ್ನೆ ಕೊನೆ ಉಸಿರೆಳೆದಿದ್ದಾರೆ.
ಲಕ್ಷ್ಮಿ ದೇವಿ ಅವರ ಜೊತೆ ಸರ್ಜಾ ಕುಟುಂಬದ ಪ್ರತಿ ಸದಸ್ಯರು ಎಮೋಷನಲ್ ಬಾಂಡ್ ಹೊಂದಿದ್ದಾರೆ. ಕುಟುಂಬಸ್ಥರು ಮಾತ್ರವಲ್ಲದೆ ಮಾಧ್ಯಮ ಮಿತ್ರರನ್ನೂ ಕೂಡ ಲಕ್ಷ್ಮಿ ದೇವಿ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.

ಅಗಲಿದ ಅಜ್ಜಿಯನ್ನು ನೆನೆದು ಮೇಘನಾ ರಾಜ್‌ ಭಾವುಕ ಪೋಸ್ಟ್‌ ಬರೆದಿದ್ದಾರೆ.
ಚಿರಂಜೀವಿ ಸರ್ಜಾರ ಕೈ ಹಿಡಿದ ಮೇಲೆ ಮೇಘನಾ ರಾಜ್‌ ಮತ್ತು ಲಕ್ಷ್ಮಿ ದೇವಿ ಅವರ ಸಂಬಂಧ ಗಟ್ಟಿಯಾಗಿತ್ತು. ಮೇಘನಾ ಹೆರಿಗೆಗೆಂದು ಆಸ್ಪತ್ರೆಗೆ ಹೋದಾಗ ಲಕ್ಷ್ಮಿ ದೇವಿ ಅವರು ಒಂದು ಕ್ಷಣವೂ ಎಲ್ಲಿಯೂ ಹೋಗದೆ ಮೇಘನಾರನ್ನು ನೋಡಿಕೊಂಡಿದ್ದರಂತೆ. ಈ ಸ್ಪೆಷಲ್ ಬಾಂಧವ್ಯದ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ.

”Iron lady for a reason! ನನ್ನ ಅಜ್ಜಿ ಸಂಬಂಧ ಅದ್ಭುತಾಗಿತ್ತು, ಚಿರು ಹೊರತು ಪಡಿಸಿ ನಾವು ಅನೇಕ ವಿಚಾರಗಳನ್ನು ಒಪ್ಪಿಕೊಂಡಿದ್ದೀವಿ ಹಾಗೇ ವಿರೋಧಿಸಿದ್ದೀವಿ. ಚಿರು ವಿಚಾರದಲ್ಲಿ ನಾನು ಮತ್ತು ಅಜ್ಜಿ ಏನೇ ಇದ್ದರೂ ಒಳ್ಳೆಯ ನಿರ್ಧಾರಗಳು ಮತ್ತು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳುವುದು. ಹೀಗಾಗಿ ಚಿರು ಅಜ್ಜಿ ಅವರನ್ನು ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ. ಕೆಲವೊಂದು ಕ್ಷಣಗಳಲ್ಲಿ ಅಜ್ಜಿ ಮತ್ತು ನಾನು ತುಂಬಾನೇ stubborn ಆಗಿ ಅನೇಕ ವಿಚಾರಗಳಿಗೆ ಜಗಳ ಮಾಡಿದ್ದೀವಿ. ಆದರೆ ಅವರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು, ನನಗೆ ಬೇಕಾದ ರೀತಿಯಲ್ಲಿಯೇ ನನಗೆ ಪ್ರೀತಿ ಕೊಟ್ಟಿದ್ದಾರೆ. ನೀವು ಇಲ್ಲದಿದ್ದರೆ ಈ ಕುಟುಂಬದ ಫೌಂಡೇಷನ್‌ ಗಟ್ಟಿಯಾಗಿರುತ್ತಿರಲಿಲ್ಲ. ನನ್ನ ದೃಷ್ಠಿಯಲ್ಲಿ ನಿಮ್ಮನ ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲ.. ನೀವು ಅಷ್ಟು ಸ್ಟ್ರಾಂಗ್. ನಾನು ಕಂಡಿರುವ ಸ್ಟ್ರಾಂಗ್ ವ್ಯಕ್ತಿ ನೀವು. ದಿನ ಬೆಳಗ್ಗೆ ನಿಮಗೆ ಕರೆ ಮಾಡುವುದನ್ನು ನಾನು ಮಿಸ್ ಮಾಡಿಕೊಳ್ಳುವೆ, ಮನೆಯಲ್ಲಿ ನಾವಿಬ್ಬರೂ ತಪ್ಪದೆ ಕುಳಿತುಕೊಂಡು ಕಾಫಿ ಕುಡಿಯುತ್ತಿದ್ದ ಕ್ಷಣವನ್ನು ಮಿಸ್ ಮಾಡಿಕೊಳ್ಳುವೆ, ನೀವು ಸಸ್ಯಹಾರಿ ಆಗಿದ್ದರೂ ಚಿರುಗಾಗಿ ಮಟನ್ ಚಾಪ್ಸ್‌ ಮಾಡಿಕೊಡುತ್ತಿದ್ದಿರಿ. ರುಚಿ ಸೂಪರ್ ಆಗಿರುತ್ತಿತ್ತು. ನನಗೆ ಖಂಡಿತ ಗೊತ್ತು ಈಗ ನೀವು ಚಿರು ಜೊತೆ ಸೇರಿಕೊಂಡು ರುಚಿ ರುಚಿಯಾಗಿರುವ ಮಟನ್ ತಿನ್ನುತ್ತಿರುತ್ತೀರಿ. ಲವ್ ಯು ಅಜ್ಜಿ. ನಾನು ಜೀವನದಲ್ಲಿ ಮರೆಯಲಾಗ ಕ್ಷಣ ಅಂದ್ರೆ ಆಸ್ಪತ್ರೆಯಲ್ಲಿ ನೀವು ಒಂದು ಕ್ಷಣವೂ ನನ್ನನ್ನು ಬಿಡದೆ ಜೊತೆಗಿದ್ದದ್ದು” ಎಂದು ಮೇಘನಾ ಬರೆದುಕೊಂಡಿದ್ದಾರೆ. 

ನಟ ಶಕ್ತಿ ಪ್ರಸಾದ್ ಮತ್ತು ಲಕ್ಷ್ಮಿ ದೇವಿ ಅವರಿಗೆ ಮೂವರು ಮಕ್ಕಳು. ಮೊದಲ ಮಗ ಕಿಶೋರ್‌ ಕುಮಾರ್, ಎರಡನೆಯವರು ಅರ್ಜುನ್ ಸರ್ಜಾ ಮತ್ತು ಮೂರನೆಯವರು ಅಮ್ಮಾಜಿ. ಲಕ್ಷ್ಮಿ ದೇವಿ ಅವರು ವೃತ್ತಿಯಲ್ಲಿ ಆರ್ಟ್‌ ಟೀಚರ್ ಆಗಿದ್ದರು. ಶಕ್ತಿ ಪ್ರಸಾದ್ ಅಗಲಿದ ನಂತರ ಬೆಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಿದ್ದರು.

ಚಿರಂಜೀವಿ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಕೊನೆಯದಾಗಿ ಲಕ್ಷ್ಮಿ ದೇವಿ ಅವರು ಕಾಣಿಸಿಕೊಂಡಿದ್ದರು. ಆಗ ಚಿರು ಪುತ್ರ ರಾಯನ್ ರಾಜ್‌ ಸರ್ಜಾ ಜೊತೆಗಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap