‘ಗಾಳಿಪಟ’, ಹಲವು ಕನ್ನಡಿಗರ ಮನದಲ್ಲಿ ಸದಾ ಉಳಿಯುವ ಸಿನಿಮಾ ಇದು. ದಶಕಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಮೂರು ಸ್ನೇಹಿತರ ಕಥೆ ಹೇಳುತ್ತಾ, ಪರಿಶುದ್ಧ ಪ್ರೇಮವನ್ನ ಕನ್ನಡಿಗರಿಗೆ ತೋರಿಸಿತ್ತು. ಸದ್ಯ ‘ಗಾಳಿಪಟ’ದ ಪ್ರಮುಖ ರೂವಾರಿಗಳಾದ ಯೋಗರಾಜ್ ಭಟ್ ಹಾಗುD ಗಣೇಶ್ ಅವರು ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಜೋಡಿಯ ‘ಗಾಳಿಪಟ 2 ಸಿನಿಮಾ ಸಿದ್ದವಾಗಿದ್ದು ಬಿಡುಗಡೆಗೂ ಸನ್ನಿಹಿತವಾಗುತ್ತಿದೆ. ಈ ನಡುವೆ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದೂ, ‘ಗಾಳಿಪಟ 2’ನಲ್ಲಿನ ಗಣೇಶ್ ಅವರ ಪಾತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.
‘ಗಾಳಿಪಟ’ದಲ್ಲಿನ ಗಣೇಶ ಎಲ್ಲರಿಗೂ ಅಚ್ಚುಮೆಚ್ಚು. ಪಟಪಟ ಮಾತಾಡುವ ಪರಿಶುದ್ಧ ಮನಸ್ಸಿನ ಹುಡುಗನಾಗಿ, ಕೊನೆಗೆ ಪರಿಶುದ್ಧ ಪ್ರೇಮಿಯಾಗಿ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಪಾತ್ರ. ಈ ಪಾತ್ರ ‘ಗಾಳಿಪಟ 2’ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ‘ಗಾಳಿಪಟ 2’ದಲ್ಲಿನ ಗಣೇಶ ಪಾತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಜುಲೈ 26ರ ಸಂಜೆ 5:02ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯಿಂದ ಟೀಸರ್ ಅನ್ನು ಲಾಂಚ್ ಮಾಡುತ್ತಿದೆ ಚಿತ್ರತಂಡ. ಮೊದಲ ಭಾಗದ ಪಾತ್ರ ಅಷ್ಟು ಅದ್ಭುತವಾಗಿ ಕೆತ್ತಿದ ಭಟ್ರು ಈ ಬಾರಿ ಏನೂ ಮಾಡಲಿದ್ದಾರೆ ಎಂದು ನೋಡಲು ಕನ್ನಡಿಗರು ಕಾಯುತ್ತಿದ್ದಾರೆ.
‘ವಿಕಟಕವಿ’ ಯೋಗರಾಜ್ ಭಟ್ ಅವರು ಬರೆದು-ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಗಾಳಿಪಟ 2’ ಸಿನಿಮಾದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಂಡ್ರೆ ಮುಂತಾದ ನಟರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದಲ್ಲಿದ್ದು, ಇದೇ ಆಗಸ್ಟ್ 12kke ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.