Karnataka Bhagya
Blogಅಂಕಣ

“ಹೊಂಬಾಳೆ” ಟ್ವೀಟ್ ಗೆ ಪ್ರೇಕ್ಷಕರು ಫುಲ್ ಕುಷ್ಏನದು ಟ್ವೀಟ್,ಇಲ್ಲಿದೆ ಕಂಪ್ಲೀಟ್ ಡೀಟೈಲ್..!

ವಿಜಯ ಕಿರಗಂದೂರು ನೇತೃತ್ವದ “ಹೊಂಬಾಳೆ” ಸಿನಿ ಸಂಸ್ಥೆ ಕೆಜಿಎಫ್ ಯಶಸ್ಸಿನ ನಂತರ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದದ್ದು ನಿಮಗೆಲ್ಲ‌ ಗೊತ್ತೇ ಇದೆ. ಅಷ್ಟೆ ಅಲ್ಲದೆ ಇದೀಗ ಹಲವು ಭಾಷೆಗಳಲ್ಲಿ ಸಿನಿಮಾ‌ ನಿರ್ಮಾಣ ಮಾಡಲು ಮುಂದಾಗಿದೆ.ಒಂದು ಹೆಜ್ಜೆ ಮುಂದಿಟ್ಟು ಮಲಯಾಳಂ ಭಾಷೆಯಲ್ಲಿ ಸಿನಿಮಾ‌ ನಿರ್ಮಿಸಲು ಹೊಂಬಾಳೆ‌ ಸಂಸ್ಥೆ ಕೇರಳ ಗಡಿಗೆ ಕಾಲಿಟ್ಟಿದೆ.

ಅಂದಹಾಗೆ ಲೂಸಿಯ ಪವನ್ ನಿರ್ದೇಶನದ, ಪಹಾದ್ ಫಾಸಿಲ್ ನಟನೆಯ “ಧೂಮಂ” ಸಿನಿಮಾ ಕೂಡ ಹೊಂಬಾಳೆ ಸಿನಿ‌ ಸಂಸ್ಥೆಯ ಅಡಿಯಲ್ಲಿ‌ ತಯಾರುಗೊಂಡಿದೆ.ಚಿತ್ರ ಮ‌ೂಲತಃ ಮಲಯಾಳಂ ಭಾಷೆಯಲ್ಲಿ ತಯಾರು ಗೊಂಡಿದ್ದು ಕನ್ನಡದಲ್ಲಿಯು ಕೂಡ ಸಿನಿಮಾದ ಟ್ರೇಲರನ್ನ ರಿಲೀಸ್ ಮಾಡಿತ್ತು, ಅದಕ್ಕೆ ತಕ್ಕಂತೆ ಉತ್ತಮ ಪ್ರತಿಕ್ರಿಯೆ ಕೂಡ ಟ್ರೇಲರ್ ಗೆ ಸಿಕ್ಕಿದೆ‌.

ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಹೊಂದಿರುವ ‘ಧೂಮಂ’ ಚಿತ್ರ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು
ಕನ್ನಡದಲ್ಲಿ ತಡವಾಗಿ ತೆರೆಗೆ ಬರುತ್ತದೆ ಅಂತಾ ಸಿನಿಪ್ರಿಯರು ಕೊಂಚ ಬೇಸರ ವ್ಯಕ್ತಪಡಿಸಿದ್ದರು.

ನಿಲ್ಲಲೇ ಬೇಕು ಎಲ್ಲ ದಿಮಾಕು ಕಾಲ ಪುರುಷನ ಕಾಲಿನ ಕೆಳಗೆ. ಇದಕ್ಕೆ ಉತ್ತರ ನೀಡಿದ ಹೊಂಬಾಳೆ ಸಂಸ್ಥೆ ಜೂನ್ 23ರಂದು ಸಿನಿಮಾ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಅಂತಾ ಟ್ವೀಟ್ ಮಾಡಿದೆ.ಇದರಿಂದ ಗಲಿಬಿಡಿ ಗೊಂಡಿದ್ದ ಸಿನಿರಸಿಕರಿಗೆ ಸಂತಸದ ಸುದ್ಧಿಯನ್ನ ಹೊಂಬಾಳೆ ಫಿಲ್ಮ್ಸ್ ಕೊಟ್ಟಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಪುನೀತ್ ಫೋಟೋ ಹಿಡಿದು ಶಭರಿ ಮಲೆ‌ ಯಾತ್ರೆ ಮಾಡಿದ ಅಭಿಮಾ‌ನಿ..

Karnatakabhagya

ತನಿಖಾ ಪತ್ರಕರ್ತೆಯಾಗಿ ತೆರೆ ಮೇಲೆ ಬರಲಿದ್ದಾರೆ ಕಾವ್ಯಾ ಶೆಟ್ಟಿ

Nikita Agrawal

‘ತೂಫಾನ್’ ಎಬ್ಬಿಸಿದ ಬಳಿಕ ಕೆಜಿಎಫ್ ನಿಂದ ಎಮೋಷನಲ್ ಹಾಡು.

Nikita Agrawal
Share via
Copy link
Powered by Social Snap