Karnataka Bhagya
Blogಅಂಕಣ

ರಾಮ-ಸೀತೆಯಂತೆ ಕಂಡ ರಾಕಿಭಾಯ್-ರಾಧಿಕಾ‌, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್..!

ಸದ್ಯಕ್ಕೆ ಟ್ರೆಡಿಂಗ್ ನಲ್ಲಿರುವ ಆದಿಪುರುಷ್ ಸಿನಿಮಾದ ಬಗ್ಗೆ ನೆಟಿಜನ್ ಗಳು ಸಿಕ್ಕಾಪಟ್ಟೆ ನೆಗಿಟಿವ್ ಕಮೆಂಟ್ಸ್ ಹಾಕುತ್ತಿದ್ದಾರೆ. ಸಿನಿಮಾದಲ್ಲಿನ ಸಂಭಾಷಣೆ,ಪಾತ್ರ ಎಲ್ಲವನು ಕುರಿತು ಪ್ರೇಕ್ಷಕ ವರ್ಗ ನಿರ್ದೇಶಕ ಹಾಗೂ ಸಿನಿತಂಡದ ವಿರುದ್ಧ ಸಾಕಷ್ಟು ಗರಂ ಆಗಿದ್ದಾರೆ.


ಅಷ್ಟಕ್ಕು ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾ ಪ್ರಭಾಸ್, ಕೃತಿ ಸನೋನ್ ಗೆ ಬಹುದೊಡ್ಡ ಗೆಲುವು ತಂದು ಕೊಡುತ್ತದೆ ಅಂತಾ ಸಿನಿ ನಿರ್ದೇಶಕರು ಅಂದು ಕೊಂಡಿದ್ರು ಆದ್ರೆ ಸಿನಿಮಾದಲ್ಲಿ‌ ಮನ ಬಂದಂತೆ ತೋರಿಸಿದ್ದಾರೆ ಅಂತಾ ಆರೋಪಿಸಲಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ ಕಂಡರೆ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ.
ಆದ್ರೆ ಈ‌‌ ಸಿನಿಮಾದಿಂದ ಬೇಸತ್ತ ಪ್ರೇಕ್ಷಕರು ಯಶ್-ರಾಧಿಕಾ ರಾಮ-ಸೀತೆ ಪಾತ್ರ ಮಾಡಿದರೆ ಹೇಗೆ ಕಾಣುತ್ತೆ ಅಂತಾ ಪೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಈ ಹಿಂದೆ ‘ರಾಮಾಯಣ’ ಧಾರಾವಾಹಿಯಲ್ಲಿ ಅದೇ ಪಾತ್ರವನ್ನು ಅರುಣ್​ ಗೋವಿಲ್​ ಮತ್ತು ದೀಪಿಕಾ ಚಿಖ್ಲಿಯಾ ಅವರು ನಿಭಾಯಿಸಿದ್ದರು. ಯಶ್​ ಮತ್ತು ರಾಧಿಕಾ, ರಾಮ-ಸೀತೆಯ ಪಾತ್ರ ಮಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಯಲ್ಲಿ ಈ ಫೋಟೊವನ್ನು ಎಡಿಟ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಷ್ಟೆ ಅಲ್ಲದೆ ರಾಧಿಕಾ ಪಂಡಿತ್ ಮತ್ತೆ ಸಿನಿಮಾದ ಕಡೆ ಮುಖ‌ ಮಾಡಲಿ ಎಂದು ಪ್ರೇಕ್ಷಕರು ಆಸೆ ಪಡುತ್ತಿದ್ದಾರಂತೆ.

ಕೆಲ ದಿನಗಳ ಹಿಂದೆ ಯಶ್ ಬಾಲಿವುಡ್ ನಿರ್ದೇಶಕ ನಿತೇಶ್​ ತಿವಾರಿ ಅವರ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುವಂತೆ ಆಪರ್ ನೀಡಲಾಗಿತ್ತಂತೆ. ಆದ್ರೆ ಯಶ್ ಗೆ ಈ ನೀಡುವುದು ಸರಿಯಲ್ಲ ಎಂದು ಬಾಲಿವುಡ್ ಕಂಗನಾ ರಾಣಾವತ್ ಪರೋಕ್ಷವಾಗಿ ಕಿಡಿ ಕಾರಿದ್ದರು.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ರೇವತಿ ನಿಖಿಲ್ ಜೊತೆ ಮೊದಲ‌ ರೀಲ್ಸ್ ಮಾಡಿದ ರೈಡರ್ !

Nikita Agrawal

ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.‌

Nikita Agrawal

ತೆರೆ ಮೇಲೂ ಒಂದಾದ ಕುಚುಕ್ಕು ಜೋಡಿ!

Nikita Agrawal
Share via
Copy link
Powered by Social Snap