Karnataka Bhagya
Blogಅಂಕಣ

ಸಕ್ಸಸ್ ಕುಷಿಯಲ್ಲಿ ಅಗ್ರಸೇನಾ ತಂಡ,ಸಿನಿಮಾ ಗೆಲ್ಲಲು ಮಾಧ್ಯಮ ಕಾರಣ..!

ಕಳೆದವಾರ ತೆರೆಕಂಡ ಅಗ್ರಸೇನಾ ಸಿನಿಮಾ ರಾಜ್ಯದಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ, ತಂದೆ ಮಗನ‌ ಬಾಂದವ್ಯವುಳ್ಳ ಕಥೆಯನ್ನ ಜನ ಮನತುಂಬಿ ಒಪ್ಪಿಕೊಂಡಿದ್ದಾರೆ.ಮಾಧ್ಯಮದ ಸಹಾಯದಿಂದ ಸಿನಿಮಾ ಇವತ್ತು ಇಷ್ಟು ಚೆನ್ನಾಗಿ ನಡಿತಿದೆ.ಸಿನಿಮಾದ ಬಗ್ಗೆ ಎಲ್ಲು ನೆಗೆಟೀವ್ ಕಮೆಂಟ್ಸ್ ಇಲ್ಲ. ಸಾಕಷ್ಟು ಜನರಿಗೆ ಸಿನಿಮಾ ರೀಚ್ ಆಗಿದೆ ಎಂದು ನಿರ್ಮಾಪಕ ಜಯರಾಂ ರೆಡ್ಡಿ ತಿಳಿಸಿದರು.

ನಿರ್ದೇಶಕ- ಮುರುಗೇಶ್
ಇದು ನಮ್ಮ ಗೆಲುವಲ್ಲ ಇದು ಮಾದ್ಯಮದವರ ಗೆಲುವು. ಪತ್ರಿಕೆಯಲ್ಲಿ ಸಿನಿಮಾದ ರಿವ್ಯೂ ನೋಡಿ ಸಾಕಷ್ಟು ಜನ‌ ಸಿನಿಮಾಗೆ ಬಂದಿದ್ದಾರೆ‌.ಸ್ವತಃ ಕರೆ ಮಾಡಿ ಜನ‌ ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ.ಇವತ್ತು ರಾಜ್ಯಾದ್ಯಂತ ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದಿದ್ದೇವೆ. ಕಥೆಯನ್ನ ನೋಡಿ ಯುವಕರು ಹೆಚ್ಚಾಗಿ ಬರ್ತಾ ಇದ್ದಾರೆ ತಂದೆ ತಾಯಿ ಆಧಾರಿತ ಈ ಸಿನಿಮಾ ನೋಡಿ ನಾವ್ ನಮ್ ತಂದೆ ತಾಯಿಯರನ್ನ ಹೆಚ್ಚಾಗಿ ನೋಡಿಕೊಳ್ತೇವೆ ಅಂತಾ ಜನ ಹೇಳ್ತಾ ಇದ್ದಾರೆ ಸಿನಿಮಾ ಗೆಲ್ಲೋದಕ್ಕೆ ಇದಕ್ಕಿಂತ ಇನ್ನೇನು ಬೇಕು… ಇದು ನನ್ನ ಜೀವನದ ಸಂತಸದ ಕ್ಷಣ ಎಂದರು.
ನಾಯಕಿ ರಚನಾ- ಇವತ್ತು ನಮ್ ತಂಡ ಇಷ್ಟೊಂದು ಕುಷಿಯಲ್ಲಿ ಇರೋಕೆ ಸಿನಿಮಾ ಗೆದ್ದರೋದೆ ಕಾರಣ ಆ ಸಂತೋಷಕ್ಕೆ ಪ್ರಮುಖವಾಗಿ ಪತ್ರಕರ್ತರು ಕಾರಣ. ನಮ್ಮ ತಂಡ ಪ್ರತಿ ಹಂತದಲ್ಲು ಸಾಕಷ್ಟು ಸಹಾಯ ಮಾಡಿದೆ.

ನಾಯಕ ಅಗಸ್ತ್ಯ ಬೆಳಗೆರೆ- ಈ ಒಂದು ಕುಷಿಯ ಕಾರ್ಯಕ್ಕೆ ಮಾಧ್ಯಮದವರೆಲ್ಲರು ಕಾರಣ ಇವತ್ತು ಜನ ನನ್ನನ್ನ ಕರ್ನಾಟಕದ ರಾಣಾ ದಗ್ಗುಬಾಟಿ ಅಂತಾ ಕರೆಯುತ್ತಿದ್ದಾರೆ ಇದನ್ನೆಲ್ಲ ಕೇಳಿದಾಗ ಸಾಕಷ್ಟು ಕುಷಿಯಾಗುತ್ತೆ ಈ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ ನಿರ್ದೇಶಕರಿಗು,ನಿರ್ಮಾಪಕರಿಗೂ ಧನ್ಯವಾದ ಹೇಳ್ತೇನೆ.ಚಿಕ್ಕ ವಯಸ್ಸಿನಲ್ಲೆ ತಂದೆಯನ್ನ ಕಳೆದುಕೊಂಡವನು ನಾನು ಸಿನಿಮಾದಲ್ಲಿ ದೊಡ್ಡದಾಗಿ ನಟಿಸಬೇಕೆಂಬ ಕನಸು ಈಗ ನನಸಾಗಿದೆ ನಿಮಗೆಲ್ಲ ನಾನು ಧನ್ಯ ಎಂದರು.

ಚಿತ್ರದಲ್ಲಿ ಸಂಗೀತ ನಿರ್ದೇಶಕ ಎಂ.ಎಸ್ ತ್ಯಾಗುರಾಜು 5 ಹಾಡುಗಳನ್ನ ರಚಿಸಿದ್ದಾರೆ.ಆರ್.ಪಿ ರೆಡ್ಡಿ ಛಾಯಾಗ್ರಹಣ ಇದೆ, ಗೌಸ್ ಪೀರ್,ವಿಜಯ್ ಶಿವು ಬೆರಗಿ ಅವರ ಸಾಹಿತ್ಯ ಇದೆ.ವಿಜಯ್ ಎಂ ಕುಮಾರ್ ಅವರ ಸಂಖಲನ ಅಗ್ರಸೇನಾ ಸಿನಿಮಾಗೆ ಇದೆ.ಒಟ್ಟಾರೆ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಬ್ಯಾಚುಲರ್ ಪಾರ್ಟಿಯಲ್ಲಿ ಬ್ಯುಸಿ ಮಮತಾ ರಾಹುತ್

Nikita Agrawal

ಲಕ‌-ಲಕ ಲಂಬರ್ಗಿನಿ ಸಾಂಗ್ ರಿಲೀಸ್ / ಫ್ಯಾನ್ಸ್ ರೆಸ್ಪಾನ್ಸ್ ಹೀಗಿದೆ

Nikita Agrawal

ಪುನೀತ್ ನೆನಪಿನಲ್ಲಿ ‘ರೈಡ್ ಫಾರ್ ಅಪ್ಪು’ ಬೈಕ್ ಮರವಣಿಗೆ

Karnatakabhagya
Share via
Copy link
Powered by Social Snap