ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟ, ನಿರ್ದೇಶಕ, ನಿರ್ಮಾಪಕನಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ.ವಿಶೇಷ ಎಂದರೆ ಈಗ ರಿಷಬ್ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಅಮೆರಿಕದ ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದ್ದೂರಿ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು.
ರಿಷಬ್ ಶೆಟ್ಟಿ
‘ನನಗೆ ಅನೇಕ ಕಾರ್ಯಕ್ರಮಕ್ಕೆ ಬರೋಕೆ ಆಹ್ವಾನ ಇತ್ತು. ಆದರೆ, ಯಾವುದಕ್ಕೂ ಬರೋಕೆ ಆಗಿರಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿದೆ. ನನಗೆ ನಿಜಕ್ಕೂ ಖುಷಿ ಆಗುತ್ತಿದೆ. ಕನ್ನಡಿಗರ ನೋಡಲು ಸಾಕಷ್ಟು ಸಂತೋಷ ಆಗುತ್ತಿದೆ. ಕನ್ನಡಿಗರಿಂದಾಗಿ ನಾನು ಇಲ್ಲಿದ್ದೇನೆ’
‘ಕಾಂತಾರ’ ಚಿತ್ರವನ್ನು ವಿಶ್ವದ ಅನೇಕರು ನೋಡಿದ್ದಾರೆ. ಆ ಸಾಲಿನಲ್ಲಿ ಟ್ರಸ್ಫರ್ಡ್ ಕೂಡ ಇದ್ದಾರೆ! ಈ ಚಿತ್ರವನ್ನು ಯೂನಿವರ್ಸಲ್ ಸಿನಿಮಾ ಎಂದು ಅವರು ಕರೆದಿದ್ದಾರೆ. ಅಮೆರಿಕ ಹಾಗೂ ವಾಷಿಂಗ್ಟನ್ಗೆ ಕನ್ನಡಿಗರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಟ್ರಸ್ಫರ್ಡ್ ಮೆಚ್ಚುಗೆ ಸೂಚಿಸಿದ್ದಾರೆ.
ನಗರದ ಪ್ಯಾರಾಮೌಂಟ್ ಥಿಯೇಟರ್ಗೆ 95 ವರ್ಷಗಳ ಇತಿಹಾಸ ಇದೆ. ಬರಾಕ್ ಒಬಾಮ ಸೇರಿ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ದರು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಅನ್ನೋದು ವಿಶೇಷ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್