ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಮಣಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ.
ಹಾಗೇ ಇಂದು ದೇಶಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಈ ನಡುವೆ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾ ರಾಜ್ ಬಗ್ಗೆ ಮಾತನಾಡಿರುವ ವಿಚಾರ ವೈರಲ್ ಆಗುತ್ತಿದೆ.
ನಾನು ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದಕ್ಕೆ ಯಾವ ರೀತಿ ಜನರು ನನ್ನನ್ನು ಅಪಹಾಸ್ಯ ಮಾಡಿದರು, ಚುಚ್ಚು ಮಾತುಗಳನ್ನು ಆಡಿದರು ಎಂಬುದನ್ನು ಹೇಳಿಕೊಂಡಿದ್ದಾರೆ.
ನನಗೆ ಬಾಡಿ ಶೇಮಿಂಗ್ ಬಗ್ಗೆ ಟ್ರೋಲ್ ಹೊಸತೇನಲ್ಲ. ಮೊದಲಿನಿಂದಲೂ ಇಂತದ್ದು ಸಾಕಷ್ಟು ನಡೆದಿವೆ. ಆದರೆ ನಾನು ಬಹಳ ಪ್ರೀತಿಸುತ್ತಿದ್ದ ಮುಸ್ತಫಾ ರಾಜ್‌ನನ್ನು ಮದುವೆ ಆದಾಗ ಜನರು ಸೋಷಿಯಲ್ ಮೀಡಿಯಾದಲ್ಲಿ ಒಂದೇ ಸಮ ಟ್ರೋಲ್ ಮಾಡಿದರು. ನಾನು ಇಂತಹ ಟ್ರೋಲಿಂಗ್‌ಗೆ ಕೇರ್ ಮಾಡುವುದಿಲ್ಲ. ಆದರೂ ಕೆಲವೊಮ್ಮೆ, ಜನರು ಏಕೆ ಹೀಗೆ ನಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಎನಿಸುತ್ತದೆ.
ನನ್ನ ಜೀವನಕ್ಕೆ ಯಾವುದು ಸರಿ ಯಾವುದು ತಪ್ಪು ಎಂದು ಆಯ್ಕೆ ಮಾಡುವುದು ನನಗೆ ಸೇರಿದ್ದು, ಈ ಟ್ರೋಲ್‌ಗಳತ್ತ ಗಮನ ಹರಿಸಿ ನನಗೆ ನಾನೇ ನೋವುಂಟುಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ ನಾನು ಯಾರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮುಸ್ತಫಾ ರಾಜ್ಗೆ ಈ ಮೊದಲೇ ಮದುವೆಯಾಗಿದ್ದು ಅವರು ಮೊದಲ ಪತ್ನಿಗೆ ಕಾನೂನಿನ ಪ್ರಕಾರ ಡೈವೋರ್ಸ್ ನೀಡಿಲ್ಲ ಎಂಬ ಮಾತು ಕಳೆದ ವರ್ಷ ಕೇಳಿಬಂದಿತ್ತು. ”ನಾನು ಹಾಗೂ ಮುಸ್ತಫಾ ರಾಜ್ ಕಾನೂನಿನ ಪ್ರಕಾರ ಬೇರೆಯಾಗಿಲ್ಲ. ನಾನು ಇನ್ನೂ ಅವರ ಪತ್ನಿಯಾಗಿ ಉಳಿದಿದ್ದೇನೆ. ಆದ್ದರಿಂದ ಪ್ರಿಯಾ ಮಣಿ ಹಾಗೂ ಮುಸ್ತಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಪತ್ನಿ ಆಯೆಷಾ ಹೇಳಿದ್ದರು.
ಪ್ರಿಯಾಮಣಿ ಕೂಡಾ ಮುಸ್ತಫಾ ಮೊದಲ ಮದುವೆ ವಿಚಾರ ನನಗೆ ಗೊತ್ತು ಎಂದು ಹೇಳಿಕೊಂಡಿದ್ದರು. ಈ ಸುದ್ದಿ ಹರಡಿದ ನಂತರ ಪ್ರಿಯಾಮಣಿ ತಮ್ಮ ಪತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಅವರಿಂದ ದೂರಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಮುಸ್ಲಿಮರೆಲ್ಲ ಕೆಟ್ಟವರಲ್ಲ, ಐಸಿಸ್ ಗಳೆಲ್ಲ ಮುಸ್ಲಿಂ ಅಲ್ಲ
ಎಂದು ಹೇಳುವ ಮಾತು ಸಖತ್ ವೈರಲ್ ಆಗಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್