Karnataka Bhagya

ನಿರ್ಮಾಪಕ ಕುಮಾರ್ ಎನ್ ಗೆ ಕಿಚ್ಚ‌ ಸುದೀಪ್ ಟ್ವಿಟರ್ ಉತ್ತರ, “ನನ್ನ ಒಳ್ಳೆಯತನವನ್ನ ದುರುಪಯೋಗ ಮಾಡಿಕೊಳ್ಳ ಬೇಡಿ”-ಕಿಚ್ಚ ಸುದೀಪ್

ಸುದೀಪ್‌ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿರ್ಮಾಪಕ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರ್‌ ಅವರ ಆರೋಪಗಳಿಗೆ ಉತ್ತರ ಎನ್ನುವಂತೆ ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸುದೀಪ್‌ ನನ್ನ ಸಿನಿಮಾದಲ್ಲಿ ನಟಿಸುವುದಾಗಿ ಹಣ ಪಡೆದು ಈಗ ಕಾಲ್‌ಶೀಟ್‌ ನೀಡದೆ ನನ್ನನ್ನ ಸತಾಯಿಸಿದ್ದಾರೆ.ಸುದೀಪ್‌ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೂಡಾ ನಿರ್ಮಾಪಕ ಫಿಲ್ಮ್‌ ಚೇಂಬರ್‌ ವಿರುದ್ಧ ಗರಂ ಆಗಿದ್ದಾರೆ. ಕುಮಾರ್‌ ಅವರ ಆರೋಪಗಳಿಗೆ ಉತ್ತರ ಎನ್ನುವಂತೆ ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಟ್ವಿಟರ್ ಪೋಸ್ಟ್

”ಈ ವಿಚಾರವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇನೆ, ನನ್ನ ಒಳ್ಳೆಯತನವು ದುರುಪಯೋಗ ಅಥವಾ ನನ್ನನ್ನು ಕೆರಳಿಸುವುದು ಸಾಧನೆ ಅಲ್ಲ. ಅದು ಪ್ರಾಮಾಣಿಕತೆಯಿಂದ ಇದ್ದಾಗ ಮಾತ್ರ ಹೊಳೆಯುತ್ತದೆ. ಅಹಂಕಾರವು ಒಳ್ಳೆಯತನದ ಪ್ರಕಾಶತೆಯನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ಸದಾ ಪ್ರಾಮಾಣಿಕತೆಯಿಂದ ಸತ್ಯವಂತಾಗಿರಿ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವ ಪೋಸ್ಟ್‌ ಒಂದನ್ನು ಸುದೀಪ್‌ ಹಂಚಿಕೊಂಡಿದ್ದಾರೆ. ಈ ಕೋಟ್ಸ್‌ ಬಹಳ ಚೆನ್ನಾಗಿದೆ, ಎಲ್ಲರೂ ಓದಿ” ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

ತಮಿಳಿನಲ್ಲಿ ತುಪಾಕಿ, ಕಬಾಲಿ, ಕರ್ಣನ್‌, ಅಸುರನ್‌ ಸೇರಿ ಅನೇಕ ಸೂಪರ್‌ ಹಿಟ್ ಮತ್ತು ಹೈ ಬಜೆಟ್‌ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರ‌ ನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್‌ ಬ್ಯಾನರ್‌ನಲ್ಲಿ ಕಿಚ್ಚನ 46ನೇ ಸಿನಿಮಾವನ್ನು ನಿರ್ಮಿಸುತ್ತಿದೆ. ಕಲೈಪುಲಿ ಎಸ್‌ ಧಾನು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ವಿಜಯ್‌ ಕಾರ್ತಿಕೇಯ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Scroll to Top
Share via
Copy link
Powered by Social Snap