Karnataka Bhagya

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಆಹ್ವಾ‌ನ ನೀಡಿದ ರಿಷಬ್ ಶೆಟ್ಟಿ- ಅಭಿಮಾನಿಗಳೊಡನೆ‌ ದೊಡ್ಡದಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ವಿಶ್ವಶ್ರೇಷ್ಠ ಕನ್ನಡಿಗ

ಕಾಂತಾರ ಸಿನಿಮಾದ ಮೂಲಕ‌ ದೇಶದ ಮೂಲೆ ಮೂಲೆಯಲ್ಲಿ ನಟ ರಿಷಬ್ ಶೆಟ್ಟಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ.ಚಂದನವನದ ಮೋಸ್ಟ್ ಪೇವರೇಟ್ ಸ್ಟಾರ್ ಅಂದ್ರೆ ತಪ್ಪಾಗೋದಿಲ್ಲ. ಅಷ್ಟೆ ಅಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ‌ ಹೊಮ್ಮಿದ್ದಾರೆ.
ನಟರನ್ನು ಭೇಟಿಯಾಗುವುದು ಅಭಿಮಾನಿಗಳಿಗೆ ಹೇಗೆ ಪುಳಕವೋ ಅಂತೆಯೇ ನಟರಿಗೂ ಅಭಿಮಾನಿಗಳನ್ನು ಭೇಟಿ ಆಗುವುದು ಸಂಭ್ರಮವೇ. ಇದೀಗ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಅದಕ್ಕಾಗಿ ಸಮಯ, ಸ್ಥಳ ನಿಗದಿಪಡಿಸಿದ್ದಾರೆ.

ಕೆಲವೇ ದಿನಗಳಲ್ಲಿ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವಿದೆ. ರಿಷಬ್ ಶೆಟ್ಟಿ ಈ ಬಾರಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಟ್ಟುಹಬ್ಬದ ನೆವದ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿ ಆಗಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ.

”ಕೆರಾಡಿ ಎಂಬ ಸಣ್ಣ ಊರಿನಿಂದ ಸಿನಿಮಾ‌ ಕನಸು ಕಟ್ಟಿಕೊಂಡು ಬಂದಿರುವ ನನಗೆ ಎಷ್ಟೆಲ್ಲ ಪ್ರೀತಿ ತೋರಿಸಿ ಇಲ್ಲಿಯವರೆಗೆ ಕರೆದು ಕೊಂಡು ಬಂದು ನಿಲ್ಲಿಸಿದ್ದೀರ. ನೀವು ಇಷ್ಟೆಲ್ಲ ಪ್ರೀತಿ ತೋರಿಸಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಆದರೆ ಕಾಂತಾರ ಬಿಡುಗಡೆ ಆದ ಬಳಿಕ ತುಂಬಾ ಜನ ನನ್ನ ಮನೆ ಹತ್ತಿರ ಬಂದಿದ್ದೀರ. ಆದ್ದರಿಂದ ನನ್ನ ಹುಟ್ಟಿದ ದಿನ ಜುಲೈ 7ನೇ ತಾರೀಖು. ಬೆಂಗಳೂರಿನ ನಂದಿನಿ ಲಿಂಕ್ ಗ್ರೌಂಡ್​ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಿಗೋಣ, ನಿಮ್ಮನ್ನು ಭೇಟಿ ಆಗಲು ನಾನು ಕಾಯುತ್ತಿರುತ್ತೀನಿ” ಎಂದಿದ್ದಾರೆ.

ಕಾಂತಾರ 2 ಸಿನಿಮಾದ ಚಿತ್ರಕತೆ ತಯಾರಿಯಲ್ಲಿರುವ ರಿಷಬ್ ಶೆಟ್ಟಿ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ. ಕಾಂತಾರ ಸಿನಿಮಾವನ್ನು ಗೆಲ್ಲಿಸಿದ ಜನರನ್ನು, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ತಮ್ಮ ಹುಟ್ಟುಹಬ್ಬದ ಸಂದರ್ಭವನ್ನು ರಿಷಬ್ ಬಳಸಿಕೊಳ್ಳಲಿದ್ದಾರೆ. ಹಾಗೆಯೇ ಹುಟ್ಟುಹಬ್ಬದ ದಿನ ಕಾಂತಾರ 2 ಸಿನಿಮಾದ ಅಪ್​ಡೇಟ್ ಸಹ ಕೊಡುವ ಸಾಧ್ಯತೆ ಇದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Share via
Copy link
Powered by Social Snap