ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ನಟಿ ಸಂಯುಕ್ತ ಹೆಗ್ಡೆ, ಸಿನಿಮಾ ಮಾತ್ರವಲ್ಲದೆ ಸಂಯುಕ್ತ ಕನ್ನಡ, ಹಿಂದಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕೂಡಾ ಹೆಸರು ಮಾಡಿದ್ದಾರೆ, ಜೊತೆಗೆ ಫಿಟ್ನೆಸ್‌ನತ್ತ ಕೂಡಾ ಹೆಚ್ಚು ಗಮನ ನೀಡುತ್ತಾರೆ.
ಇತ್ತೀಚಿಗೆ ನಟಿಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ ಸದಾ ಕಾಂಟ್ರವರ್ಸಿಯಿಂದಲೇ ಫೇಮಸ್ ಆಗುತ್ತಿರುವ ನಟಿ ಈ ಬಾರಿ ಟಾಪ್ ಲೆಸ್ ವಿಡಿಯೋ ಒಂದನ್ನ ಶೇರ್ ಮಾಡಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿಮ್ಮ ದೇಹ ನಿಮ್ಮ ಆಸ್ತಿ ಅಂತಾ ಸಂಯುಕ್ತ ಹೆಗ್ಡೆ
ಸಂಯುಕ್ತ ಹೆಗ್ಡೆ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ತಾವು ಧರಿಸುವ ಬಟ್ಟೆಗಳಿಂದಲೇ ವಿವಾದಕ್ಕೆ ಒಳಗಾಗುತ್ತಾರೆ. ಇದೀಗ ಸಂಯುಕ್ತ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದು ಇದಕ್ಕೆ ಪರ ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಸಂಯುಕ್ತ ಟಾಪ್‌ಲೆಟ್ ಆಗಿ ದೇಹ ಪ್ರದರ್ಶನ ಮಾಡಿದ್ದಾರೆ. ಸಂಯುಕ್ತ ಬಾಡಿ ನೋಡಿ ಹಲವರು ಶಾಕ್ ಆಗಿದ್ದಾರೆ. ಹುಡುಗರಂತೆ ಬಾಡಿ ಬಿಲ್ಡ್ ಮಾಡಿರುವ ಸಂಯುಕ್ತ ನಿಮ್ಮ ದೇಹವೇ ನಿಮ್ಮ ಆಸ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲೀಕತ್ವ ಹೊಂದಿಲ್ಲ, ಮಹಿಳೆಯರಾಗಿ ನಾವು ಸ್ಟ್ರಾಂಗ್ ಆಗಿರಬೇಕು, ಸ್ವತಂತ್ಯ್ರಳಾಗಿ, ಆತ್ಮವಿಶ್ವಾಸದಿಂದ ಇರಬೇಕು ಎಂದು ಸಂಯುಕ್ತ ಬರೆದುಕೊಂಡಿದ್ದಾರೆ. ಕೆಲವರು ಹೆಣ್ಣಾಗಿ ಈ ರೀತಿ ನಿಮ್ಮ ದೇಹ ಪ್ರದರ್ಶಿಸುವ ಅಗತ್ಯವಿರಲಿಲ್ಲ, ಜನರ ಗಮನ ಸೆಳೆಯಲು ನೀವು ಮಾಡ್ತಿರೋ ಗಿಮಿಕ್ ಅಷ್ಟೇ ಎನ್ನುತ್ತಿದ್ದಾ
2020 ರಲ್ಲಿ ಬೆಂಗಳೂರಿನ ಪಾರ್ಕ್‌ವೊಂದರಲ್ಲಿ ಸಮಯುಕ್ತ ತಮ್ಮ ಸಂಗಡಿಗರೊಂದಿಗೆ ಹುಲಾ ಹೂಪ್ಸ್ ಅಭ್ಯಾಸ ಮಾಡುತ್ತಿದ್ದ ವೇಳೆ ಅವರ ಡ್ರೆಸ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಮಹಿಳೆಯೊಬ್ಬರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು.
ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಂಯುಕ್ತ ತೆಲುಗು, ತಮಿಳು ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದರು ಇತ್ತೀಚೆಗೆ ತೆರೆ ಕಂಡ ತುರ್ತು ನಿರ್ಗಮನ ಸಿನಿಮಾದಲ್ಲಿ ಸಂಯುಕ್ತ ನಟಿಸಿದ್ದಾರೆ. ಅವರು ನಟಿಸಿರುವ ಕ್ರೀಮ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ತೆರೆ ಕಾಣಲಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್