ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ‘ಜೈಲರ್’ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು.
ಸನ್ ಪಿಕ್ಚರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ನಿರ್ದೇಶಿದ್ದಾರೆ. ಬಾಲಿವುಡ್ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.
ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್