ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ : ಚೆನ್ನಾರೆಡ್ಡಿ ತುನ್ನೂರ
ಯಾದಗಿರಿ :1 ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದ್ದು, ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಇದಕ್ಕೆ ಸಂಬAಧಿಸಿದAತೆ ವಿರುದ್ಧ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಂತೆ ಬಿಂಬಿಸಿ ಬಿಜೆಪಿ ಪೋಸ್ಟರ್ ಬಿಡುಗಡೆಗೊಳಿಸಿರುವದನ್ನು ಹೀನ ಕೃತ್ಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಆಕ್ರೋಶವ್ಯಕ್ತಪಡಿಸಿದರು.
ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ವಿರುದ್ದಧ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಸುಭಾಷ್ ವೃತ್ತದ ವರಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಸರೆಡ್ಡಿ ಅನಪೂರ, ಮರಿಗೌಡ ಹುಲಕಲ್, ಶರಣಪ್ಪ ಸಲಾದಪೂರ, ರಾಘವೇಂದ್ರ ಮಾನಸಗಲ್, ಅಮರೇಶ ಜಾಕಾ, ಸೋಮು ಸಾಹುಕಾರ, ಅಯ್ಯಣ್ಣ ಜೇರಬಂಡಿ, ಗೌತಮ್ ಕ್ರಾಂತಿ, ಲಕ್ಷö್ಮಣ ಆಶನಾಳ ಸೇರಿದಂತೆ ಇತರರಿದ್ದರು.